*ಸಡಗರ ಸಂಭ್ರಮದಿಂದ ಜರುಗಿದ ಶ್ರೀ ಉದ್ಭವ ಚನ್ನಬಸವೇಶ್ವರ ರಥೋತ್ಸವ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೈಲಹೊಂಗಲ ಪಟ್ಟಣದ ಮಹಾತ್ಮ ಗಾಂದಿ ಹೌಸಿಂಗ್ ಕಾಲೂನಿ ಉದ್ಭವ ಶ್ರೀ ಚನ್ನಬಸವೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಶ್ರಾವಣ ಮಾಸದ ಕೊನೆಯ ಸೋಮವಾರ ಸಡಗರ ಸಂಭ್ರಮದಿಂದ ಜರುಗಿತು.
ನೂತನ ರಥೋತ್ಸವಕ್ಕೆ ಕಬ್ಬು ಬಾಳೆ ತೆಂಗು ವಿವಿಧ ಹೂ ಮಾಲೆಗಳಿಂದ ಶೃಂಗರಿಸಲಾಗಿತ್ತು.ರಥದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗಿತ್ತು.
ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಭಕ್ತರು ಹರ ಹರ ಮಹಾದೇವ, ಶ್ರೀ ಚೆನ್ನಬಸವೇಶ್ವರ ಮಹಾರಾಜ ಕೀ ಜೈ ಎಂದು ಘೋಷಣೆ ಮೊಳಗಿಸುತ್ತ ರಥ ಎಳೆದು ಭಕ್ತಿ ಭಾವ ಮೆರೆದರು. ಭಕ್ತರು ಬಾಳೆಹಣ್ಣು, ಉತ್ತತ್ತಿ ಎಸೆದು ಧನ್ಯತಾ ಭಾವ ಮೆರೆದರು. ರಥೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಾಗಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ರಥೋತ್ಸವ ವಿವಿಧ ವಾದ್ಯಮೇಳದೊಂದಿಗೆ ದೇವಸ್ಥಾನದಿಂದ ಆರಂಭವಾಗಿ ಈಟಿ ಬಸವೇಶ್ವರ ದೇವಸ್ಥಾನ ವರೆಗೆ ಸಾಗಿ ಮರಳಿ ದೇವಸ್ಥಾನಕ್ಕೆ ಬಂದು ತಲುಪಿತು.
ಸಂಸದ ಜಗದೀಶ ಶೆಟ್ಟರ, ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಡಾ. ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಜೆ ಡಿ ಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ರೋಹಿಣಿ ಪಾಟೀಲ ದೇವಸ್ಥಾನಕ್ಕೆ ಭೇಟಿ ನೀಡಿದರು.
ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಗಂಗಪ್ಪ ಗುಗ್ಗರಿ, ಬಿ ಸಿ ಹರ್ಲಾಪುರ, ಶಿಕ್ಷಕ ಸಿ ಎಸ್ ಧರೇಪ್ಪನವರ, ವೀರಭದ್ರ ಕೌದಿ, ಸೋಮನಿಂಗ ಹರ್ಲಾಪುರ, ಬಸವರಾಜ ಹರ್ಲಾಪುರ, ಬಾಳನಗೌಡ ಪಾಟೀಲ, ಸಂಗಯ್ಯ ವಸ್ತ್ರದ, ಬಸವರಾಜ ನಾಗನೂರ, ಶಿವಪುತ್ರ ತಲ್ಲೂರ, ಈರಣ್ಣ ದೇಗಾಂವಿ, ಬಸವರಾಜ ಮೈಲೇರಿ, ಮಲ್ಲವ್ವ ಅಂಗಡಿ, ರೂಪಾ ಪಾಟೀಲ, ಗಂಗಮ್ಮ ದಳವಾಯಿ, ಗಂಗವ್ವ ವಸ್ತ್ರದ ಹಾಗೂ ಭಕ್ತರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ