ಪ್ರಗತಿವಾಹಿನಿ ಸುದ್ದಿ, ಕೋಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಒಂದೆಡೆ ಅಶಾಂತಿ ತಲೆದೋರಿದ್ದರೆ ಇನ್ನೊಂದೆಡೆ ಇಂಧನ ಸಹಿತ ಅಗತ್ಯ ವಸ್ತುಗಳ ಅಲಭ್ಯತೆಗೆ ಗಣ್ಯರು, ಪ್ರತಿಷ್ಠಿತರೆಲ್ಲ ಸಂಕಷ್ಟ ಅನುಭವಿಸಬೇಕಿದೆ.
ಇದೀಗ ಶ್ರೀಲಂಕನ್ ಕ್ರಿಕೆಟಿಗ ಚಮಿಕಾ ಕರುಣಾರತ್ನೆ ಎರಡು ದಿನಗಳ ಕಾಲ ಸರತಿ ಸಾಲಿನಲ್ಲಿ ನಿಂತು ತಮ್ಮ ಕಾರಿಗೆ ಪೆಟ್ರೋಲ್ ಭರಿಸಿಕೊಳ್ಳಲು ಏನೆಲ್ಲ ಕಷ್ಟ ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಕ್ಲಬ್ ಕ್ರಿಕೆಟ್ ಸೀಸನ್ ಇರುವುದರಿಂದ ತಾವು ಕೊಲಂಬೊದಲ್ಲಿ ಮತ್ತು ಬೇರೆ ಬೇರೆ ಸ್ಥಳಗಳಿಗೆ ಅಭ್ಯಾಸಕ್ಕಾಗಿ ಹೋಗಬೇಕಾಗಿದೆ. ಆದರೆ ಕಳೆದೆರಡು ದಿನಗಳಿಂದ ಇಂಧನಕ್ಕಾಗಿ ಸರದಿಯಲ್ಲಿ ನಿಂತಿದ್ದು 10,000 ರೂ. ವ್ಯಯಿಸಿ ಇಂಧನ ಭರಿಸಬೇಕಾಯಿತು. ಅದು 2-3 ದಿನಗಳವರೆಗಷ್ಟೇ ಇರುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಾಮೆಂಟ್ ಗೆ ಮುನ್ನವೇ ಇಂಧನ ಬಿಕ್ಕಟ್ಟು ಎದುರಾಗಿದೆ. ಇದು ತಮಗೆ ಸಂಕಷ್ಟವನ್ನು ತಂದೊಡ್ಡಿದೆ ಎಂದು ಚಮಿಕಾ ಕರುಣಾರತ್ನೆ ತಮ್ಮ ಸ್ಥಿತಿಗತಿ ಹೇಳಿಕೊಂಡಿದ್ದಾರೆ.
ಬೆಳಗಾವಿ ಸೇರಿದಂತೆ 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ