
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿನ ಸ್ವಾಮಿನಾಥ ಕಾಲೋನಿ ನಿವಾಸಿ, ಲೇಖಕ, ಸಂಶೋಧಕ ಕನ್ನಡ ಪ್ರಾಧ್ಯಾಪಕ ನಿವೃತ್ತ
ಪ್ರಾಚಾರ್ಯ ಡಾ ಶ್ರೀನಿವಾಸ ಕುಲಕರ್ಣಿ ಅವರು ತಮ್ಮ ಸ್ವಗೃಹದಲ್ಲಿ ಮಂಗಳವಾರ ಮಧ್ಯಾಹ್ನ ೩.೩೦ ಗಂಟೆಗೆ ವಿಧಿವಶರಾಗಿದ್ದಾರೆ.
ಅವರು ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬೆಳಗಾವಿಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರದು ಮಹತ್ವದ ಹೆಸರಾಗಿತ್ತು.
ಅವರ ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ 8 ಗಂಟೆಗೆ ನಗರದ ಶಹಾಪುರ ರುದ್ರಭೂಮಿಯಲ್ಲಿ ಜರುಗಲಿದೆ.
ಕಳೆದ ಶುಕ್ರವಾರವಷ್ಟೇ ತೀವ್ರ ಅನಾರೋಗ್ಯದ ನಡುವೆಯೂ “ಶ್ರೀನಿಧಿ”ಅಭಿನಂದನಾ ಗ್ರಂಥ ಸ್ವೀಕರಿಸಿದ್ದ
ಬೆಳಗಾವಿಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಡಾ.ಶ್ರೀನಿವಾಸ ಕುಲಕರ್ಣಿ ಇಂದು ಮಧ್ಯಾನ್ಹ
ಕೊನೆಯುಸಿರೆಳೆದಿದ್ದಾರೆ. ಶುಕ್ರವಾರ ಬೆಳಗಾವಿಯ ಚೆನ್ನಮ್ಮ ನಗರದ
ಸ್ವಾಮಿನಾಥನ್ ಕಾಲನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿಯೇ ಅವರಿಗೆ ತಮ್ಮ ಸುತ್ತ ಎಂಥ ಕಾರ್ಯಕ್ರಮ
ನಡೆಯುತ್ತಿದೆಯೆಂಬುದೇ ಅರಿವಿರಲಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ