ನನ್ನನ್ನು ಗೇಲಿ ಮಾಡುತ್ತಿದ್ದವರಿಗೆ ಉತ್ತರ ಕೊಟ್ಟಿದ್ದೇನೆ; ವಾಲ್ಮೀಕಿ ಸಮುದಾಯ ಐತಿಹಾಸಿಕ ಕ್ಷಣದಲ್ಲಿದೆ ಎಂದ ಸಚಿವ ಶ್ರೀರಾಮುಲು
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಾಲ್ಮೀಕಿ ಸಮುದಾಯದವರು ಇಂದು ಐತಿಹಾಸಿಕ ಕ್ಷಣದಲ್ಲಿದ್ದೇವೆ. ಮೀಸಲಾತಿ ಹೆಚ್ಚಳಕ್ಕಾಗಿ ಹಲವು ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ ಎಂದು ಎಸ್ ಸಿ, ಎಸ್ ಟಿ ವರ್ಗಗಳ ಕಲ್ಯಾಣ ಖಾತೆ ಹಾಗೂ ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಜನಸಂಖ್ಯೆ ಆಧಾರಾದ ಮೇಲೆ ಮೀಸಲಾತಿ ಹೆಚ್ಚಳ ಮಾಡಲಾಗುತ್ತಿದೆ. ಎಸ್ ಸ್ಸಿ ಸಮುದಾಕ್ಕೆ ಶೇ.15ರಿಂದ ಶೇ.17, ಎಸ್ ಟಿ ಸಮುದಾಯಕ್ಕೆ ಶೇ.3ರಿಂದ 7ರಷ್ಟು ಮೀಸಲಾತಿ ಹೆಚ್ಚಿಸಲು ಸರ್ಕಾರ ಒಪ್ಪಿದೆ. ಈ ಮೂಲಕ ಮೀಸಲಾತಿ ಹೆಚ್ಚಿಸಿಲ್ಲ ಎಂದು ನನ್ನನ್ನು ಗೇಲಿ ಮಾಡುತ್ತಿದ್ದವರಿಗೆ ಉತ್ತರ ಸಿಕ್ಕಿದೆ ಎಂದರು.
ಶ್ರಿರಾಮುಲು ಬರಿ ಬಾಯಲ್ಲಿ ಹೇಳುತ್ತಾನೆ. ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ರಕ್ತದಲ್ಲಿ ಬರೆದುಕೊಡುವುದಾಗಿ ಮಾತುಕೊಟ್ಟಿದ್ದ. ಆದರೆ ಸಚಿವನಾಗಿ ಇಷ್ಟು ದಿನವಾದರೂ ಯಾವುದೇ ಭರವಸೆ ಈಡೇರಿಲ್ಲ ಎಂದು ನನ್ನ ಬಂಧುಗಳು ಕೂಡ ಗೇಲಿ ಮಾಡುತ್ತಿದ್ದರು. ಸಾಮಜಿಕ ಜಾಲತಾಣಗಳಲ್ಲಿ ಬೈಸಿಕೊಂಡು ಸಾಕಾಗಿ ಹೋಗಿತ್ತು. ಆದರೂ ಮೀಸಲಾತಿ ಹೆಚ್ಚಳಕ್ಕಾಗಿ ನನ್ನ ಬೆಡಿಕೆಯಿಂದ ಹಿಂದೆ ಸರಿದಿರಲಿಲ್ಲ. ಹಲವು ವರ್ಷಗಳ ಹೋರಾಟಕ್ಕೆ ಇಂದು ಗೆಲುವು ಸಿಕ್ಕಿದೆ ಎಂದು ಹೇಳಿದರು.
ಮೀಸಲಾತಿ ಹೆಚ್ಚಳಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಒಪ್ಪಿರುವುದು ಸಂತಸ ತಂದಿದೆ. ವಾಲ್ಮೀಕಿ ಸಮುದಾಯ ಇಂದು ಐತಿಹಾಸಿಕ ಕ್ಷಣದ ಸಂಭ್ರಮದಲ್ಲಿದೆ ಎಂದು ತಿಳಿಸಿದರು.
ಹಾವು ಕಡಿತಕ್ಕೆ ಬಲಿಯಾದ ರೈತನ ಕುಟುಂಬಕ್ಕೆ ಪರಿಹಾರ ವಿತರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ
https://pragati.taskdun.com/local/belagavi-rural-mla-laxmi-hebbalkar-distributed-compensation-to-deceased-farmers-family/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ