*ಮಹಿಳೆಯರು ನಕಾರಾತ್ಮಕ ವಿಚಾರಗಳಿಂದ ದೂರ ಇರಬೇಕು: ಸಿದ್ದಬಸವ ದೇವರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ಕಾರಿ ಇಲಾಖೆಯ ಯೋಜನೆಗಳು ಹಾಗೂ ರಾಷ್ಟ್ರೀಯಕೃತ ಬ್ಯಾಂಕ್ ಗಳಿಂದ ಸಾಲ ಸಾಲಭ್ಯ ಪಡೆದು ಸ್ವ ಉದ್ಯೋಗ ಮಾಡಿ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು. ನಕಾರಾತ್ಮಕ ಜನರು ಹಾಗೂ ವಿಚಾರಗಳಿಂದ ದೂರ ಇದ್ದು ತಮ್ಮ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಯಮಕನಮರಡಿ ಶೂನ್ಯ ಸಂಪಾದನಾ ಪೀಠದ ಸಿದ್ದಬಸವ ದೇವರು ಕರೆ ನೀಡಿದರು.
ಅಂತಾರಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ ಗ್ರಾಮದಲ್ಲಿ ಕೌಶಲ್ಯಭಿವೃಧಿ, ಉದ್ಯಮಶೀಲತೆ ಮತ್ತು ಜೀವನಪಾಯ ಇಲಾಖೆಯ ರಾಷ್ಟ್ರೀಯ ಗ್ರಾಮೀಣ ಜೀವನಪಾಯ ಅಭಿಯಾನದ ಸ್ವ ಸಹಾಯ ಸಂಘಗಳ ಸದಸ್ಯರು ಉತ್ಪಾದಿಸಿದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮ ದಲ್ಲಿ ದಿವ್ಯ ಸಾನಿದ್ಯವನ್ನು ವಹಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಬೆಳಗಾವಿ, ತಾಲೂಕಾ ಪಂಚಾಯತ್ ಹುಕ್ಕೇರಿ ಹಾಗೂ ಸಂಜೀವಿನಿ ಮಹಿಳಾ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತು.
ರವೀಂದ್ರ ಬಂಗಾರಪ್ಪನವರ್. ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ಬೆಳಗಾವಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾಗ್ಯಶ್ರೀ ಜಹಾಗಿರದಾರ ಸಹಾಯಕ ಯೋಜನಾಧಿಕಾರಿಗಳು, ಜಿಲ್ಲಾ ಪಂಚಾಯತ್ ಬೆಳಗಾವಿ, ಪ್ರಶಾಂತ್ ಘೋಡಕೆ, ಜಿಲ್ಲಾ ಅಗ್ರಹಣಿ ಬ್ಯಾಂಕ್ ವ್ಯವಸ್ಥಾಪಕ್, ಟಿ.ಆರ್. ಮಲ್ಲಾಡದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತ್ ಹುಕ್ಕೇರಿ,
ಯಶಸ್ವಿ ಮಹಿಳಾ ಉದ್ಯಮೇದಾರರು ಶಾರವ್ವಾ ದರೋಜಿ, ಕಿರಣ್ ರಜಪೂತ ಕಾಂಗ್ರೆಸ್ ಯುವ ಮುಖಂಡರು, ಎಚ್ಎಸ್ ಕರೆಹೊನ್ನ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಯಮಕನಮರಡಿ, ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು, ಒಕ್ಕೂಟದ ಅಧ್ಯಕ್ಷರು ಜಿಲ್ಲಾ ಯೋಜನಾ ನಿರ್ವಹಣಾ ಘಟಕದ ಸಂಜೀವಿನಿ ಜಿಲ್ಲಾ ಹಾಗೂ ಮತ್ತು ತಾಲೂಕ ಅಭಿಯಾನ ನಿರ್ವಹಣ ಘಟಕದ ಸಿಬ್ಬಂದಿಗಳು, ತಾಲೂಕಿನ ಎಲ್ಲಾ ಸಂಜೀವಿನಿ ಮಹಿಳಾ ಒಕ್ಕೂಟದ ಸಿಬ್ಬಂದಿಗಳ ಮತ್ತು SHG ಮಹಿಳೆಯರು ಉಪಸ್ಥಿತ ಇದ್ದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಗೆ ಉದ್ಯೋಗ ಕೈಗೊಳ್ಳಲು ಉದ್ಯಮಿದಾರರಿಗೆ ತಾಲ್ಲೂಕಿನ ಸುಮಾರು 50 ಸ್ವ ಸಹಾಯ್ ಸಂಘಗಳಿಗೆ ರೂ. 1 ಕೋಟಿ 50 ಲಕ್ಷ ಬ್ಯಾಂಕ್ ಸಾಲ ಮಂಜೂರಾತಿ ಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಿದರು.
ಜಿಲ್ಲೆಯಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸಿದ ಮಹಿಳಾ ಒಕ್ಕೂಟ ಮತ್ತು ಅತ್ಯುತ್ತಮ ಮಹಿಳಾ ಸ್ವ ಸಹಾಯ ಸಂಘಗಳಿಗೆ ಪ್ರಶಸ್ತಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು.



