
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ಅಮೇರಿಕಾದ ಹೂಸ್ಟನ್ ನಗರದಲ್ಲಿ 50 ಸಹಸ್ರ ಜನ ಸೇರಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದು ಎಲ್ಲರಿಗೂ ಗೊತ್ತು.
ಈ ಅಪರೂಪದ ಸಮಾವೇಶದಲ್ಲಿ ಇನ್ನೊಂದು ಅಪರೂಪದ ಘಟನೆ ನಡೆಯಿತು. ಪ್ರಧಾನ ಮಂತ್ರಿಗಳ ಸೋಶಿಯಲ್ ಮೀಡಿಯಾಗಳಲ್ಲಿ ಸಹ ಈ ಘಟನೆ ಸ್ಥಾನ ಪಡೆಯಿತು. ಅಲ್ಲಿನ ಸಣ್ಣ ವೀಡಿಯೋ ಮತ್ತು ಫೋಟೋ ವಿಶ್ವಾದ್ಯಂತ ಇಂದು ಪಸರಿಸಿತು.
https://youtu.be/vCbbb5ttFw8
ಇದು ಕರ್ನಾಟಕದ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹವ್ಯಕ ಬಾಲಕನೋರ್ವನ ವೀಡಿಯೋ. ಬಾಲಕ ಮೋದಿ ಮತ್ತು ಟ್ರಂಪ್ ಜೊತೆ ಸೆಲ್ಫಿ ತೆಗೆಸಿಕೊಳ್ಳುವ, ಅವರಿಬ್ಬರಿಂದಲೂ ಶಹಬ್ಬಾಸ್ ಗಿರಿ ಪಡೆಯುವ ವೀಡಿಯೋ ಅದು.
ಅಲ್ಲಿನ ಜನಜಂಗುಳಿಯಲ್ಲೂ, ಬಿಳಿ ಬಣ್ಣದ ಟಿ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದ ಬಾಲಕ ಸಾತ್ವಿಕ್ ಹೆಗಡೆ ವಿಶ್ವದ ಅಗ್ರಗಣ್ಯರೊಂದಿಗೆ ಸೆಲ್ಫಿ ಕೇಳಿ, ತೆಗೆಸಿಕೊಳ್ಳುವ ಅವಕಾಶ ಪಡೆದಿದ್ದಾನೆ. ಸಿದ್ದಾಪುರ ತಾಲೂಕಿನ ಪ್ರಭಾಕರ ಮತ್ತು ಮೇಧಾ ಹೆಗಡೆ ದಂಪತಿಯ ಪುತ್ರ ಸಾತ್ವಿಕ್ ಹೆಗಡೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ