Kannada NewsKarnataka NewsPolitics

*ಸಿಎಂ ಸಿದ್ದರಾಮಯ್ಯ ಮತ್ತೆ ದೆಹಲಿ ಪ್ರವಾಸ: ಇಲ್ಲಿದೆ ಕಾರ್ಯಕ್ರಮಗಳ ಪಟ್ಟಿ*

ಪ್ರಗತಿವಾಹಿನಿ ಸುದ್ದಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್‌ ಒಂದರಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಆಗಸ್ಟ್‌ 1ರಂದು ಸಂಜೆ ಆರು ಗಂಟೆಗೆ ದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಮಾಹಿತಿ ಮತ್ತ ತಂತ್ರಜ್ಞಾನ ಇಲಾಖೆ ವತಿಯಿಂದ  “ಬ್ರಿಡ್ಜ್‌ ಟು ಬೆಂಗಳೂರು” ಕಾರ್ಯಕ್ರಮ ಆಯೋಜಿಸಲಿದ್ದಾರೆ.

ವಿವಿಧ ದೇಶಗಳ ರಾಯಭಾರಿಗಳು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಳ್ಳುವರು.

ಆಗಸ್ಟ್‌ 2ರಂದು ಬೆಳಗ್ಗೆ 09.30ಕ್ಕೆ ಎಐಸಿಸಿ ಕಾನೂನು, ಮಾಹಿತಿ ಹಕ್ಕು ವಿಭಾಗ ವಿಜ್ಞಾನ ಭವನದಲ್ಲಿ ಆಯೋಜಿಸಿರುವ ಸಾಮಾಜಿಕ ನ್ಯಾಯ, ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ದೃಷ್ಟಿಕೋನ ಕುರಿತಾದ ವಿಚಾರ ಸಂಕಿರಣದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸುವರು.

Home add -Advt

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತಿತರರ ವರಿಷ್ಠರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸುವರು,

ವಿಚಾರ ಸಂಕಿರಣದ ಉದ್ಘಾಟನೆಯ ಬಳಿಕ 11.30ಕ್ಕೆ ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯ ಕುರಿತಾಗಿ ಭಾಷಣ ಮಾಡಲಿದ್ದಾರೆ.


Related Articles

Back to top button