LatestUncategorized

*ಆರೋಗ್ಯ ಇಲಾಖೆಯಲ್ಲಿ 3000 ಕೋಟಿ ಹಗರಣ; ಸಚಿವ ಸುಧಾಕರ್ ವಿರುದ್ಧ ಗಂಭೀರ ಆರೋಪ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರ ಮಾಡಿದೆ. ಆಲಿಬಾಬಾ ಮತ್ತು 40 ಜನ ಕಳ್ಳರ ಗುಂಪಿನಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಅವರೂ ಸದಸ್ಯರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿನಡೆಸಿದ ಸಿದ್ದರಾಮಯ್ಯ, ಆರೋಗ್ಯ ಇಲಾಖೆಯಲ್ಲಿ 3 ಸಾವಿರ ಕೋಟಿ ಹಗರಣ ನಡೆದಿದೆ. ಕೊರೊನಾ ಸಮಯದಲ್ಲಿ ಹಣ ಹೊಡೆದಿದ್ದಕ್ಕೆ ಸಚಿವ ಸುಧಾಕರ್ ಮಾಸ್ಟರ್ ಎಂದು ಆರೋಪಿಸಿದರು.

ಬಿಜೆಪಿಯವರು ಸುಳ್ಳು ಹೇಳುವುದಕ್ಕೆಂದೇ ಎಂಎಲ್ ಸಿ ರವಿಕುಮಾರ್ ಅವರನ್ನು ಇಟ್ಟಿದ್ದಾರೆ. ಸಿಎಂ ಬೊಮ್ಮಾಯಿ ಅವರು ಸಚಿವ ಸುಧಾಕರ್ ಹಾಗೂ ಅಶ್ವತ್ಥನಾರಾಯಣ ಅವರಿಂದ ಸುದ್ದಿಗೋಷ್ಠಿ ನಡೆಸಿ ಸುಳ್ಳು ಹೇಳಿಸಿದ್ದಾರೆ. 35 ಸಾವಿರ ಕೋಟಿ ಅವ್ಯವಹಾರ ಎಂದು ನಮ್ಮ ವಿರುದ್ಧ ಆರೋಪ ಮಾಡಿದ್ದಾರೆ. 2008-2009ರಲ್ಲಿ ಶೇ.49ರಷ್ಟು ತಾಳೆಯಾಗದ ಅನುದಾನವಿತ್ತು. 2015-16ರಲ್ಲಿ ಶೇ.16ರಷ್ಟು ತಾಳೆಯಾಗದ ಅನುದಾನವಿತ್ತು. ಬಿಜೆಪಿ ಅವಧಿಯಲ್ಲಿ ಶೇ.50ರಷ್ಟು ರೀ ಕನ್ಸಿಲೇಷನ್, ತಾಳೆ ಆಗುತ್ತಿರಲಿಲ್ಲ. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಶೇ.19ರಷ್ಟು ಮಾತ್ರ ರೀ ಕನ್ಸಿಲೇಷನ್, ತಾಳೆ ಆಗುತ್ತಿರಲಿಲ್ಲ. ಇದು ಹಗರಣವಲ್ಲ ತಾಳೆಯಾಗದ ಲೆಕ್ಕ. ಈ ಮೂರ್ಖರಿಗೆ ಇದು ಅರ್ಥವಾಗಬೇಕಾ ಇಲ್ವಾ? ಎಂದರು.

ಸುಧಾಕರ್ ಗೆ ರಾಜಕೀಯ ಜೀವನ ಕೊಟ್ಟಿದ್ದೇ ನಮ್ಮ ಪಕ್ಷ. ಹಣದ ಆಸೆಗಾಗಿ ಸುಧಾಕರ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿ ಮಂತ್ರಿಯಾದರು. ಪಾಪ ಸುಧಾರಕ್ ಗೆ ಸಿಎಜಿ ವರದಿ ಅರ್ಥ ಮಾಡಿಕೊಳ್ಳಲು ಆಗಿಲ್ಲ. ಅನುದಾನ ಖರ್ಚು ವೆಚ್ಚ ಎಲ್ಲವೂ ವರದಿಯಲಿದೆ ಎಂದು ಹೇಳಿದರು.

*ಹಾವೇರಿಯಲ್ಲಿ ಎಲ್ಲಾ ನೀರಾವರಿ ಯೋಜನೆಗೆ ಚಾಲನೆ ಕೊಟ್ಟಿದ್ದು ನಮ್ಮ ಸರ್ಕಾರ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

https://pragati.taskdun.com/cm-basavaraj-bommaihaverid-k-sihivakumar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button