ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನ ಪರಿಷತ್ ನಲ್ಲಿ ನಡೆದ ಗಲಾಟೆ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ-ಜೆಡಿಎಸ್ ಸದಸ್ಯರು ಗೂಂಡಾಗಿರಿ ನಡೆಸಿದ್ದಾರೆ. ಕಲಾಪದ ನಿಯಮವನ್ನೇ ಗಾಳಿಗೆ ತೂರಿದ್ದಾರೆ ಎಂದು ವಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಪರಿಷತ್ ಕಲಾಪಕ್ಕೆ ಒಂದು ನಿಯಮವಿದೆ. ಆ ನಿಯಮ ಉಲ್ಲಂಘನೆ ಮಾಡಿ ಸಭಾಪತಿ ಒಳಗೆ ಬಾರದಂತೆ ಬಾಗಿಲು ಹಾಕಿದ್ದಾರೆ. ಕಲಾಪ ನಡೆಯಲು ಬಿಟ್ಟಿಲ್ಲ ಬಿಜೆಪಿಗೆ ಜೆಡಿಎಸ್ ಶಾಸಕರು ಕೈಜೋಡಿಸಿದ್ದಾರೆ. ಇಬ್ಬರು ಸೇರಿ ಗೂಂಡಾಗಿರಿ ಮಾಡಿದ್ದಾರೆ ಎಂದು ಆರೋಪಿಸಿದರು.
ಪರಿಷತ್ ನಲ್ಲಿ ಏನು ನಡೆದಿದೆ ಎಂಬುದನು ರಾಜ್ಯದ ಜನತೆ ನೋಡಿದ್ದಾರೆ. ಪರಿಷತ್ ನಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಕೆಳಮನೆಯಲ್ಲಿ ಸ್ಪೀಕರ್, ಮೇಲ್ಮನೆಯಲ್ಲಿ ಸಭಾಪತಿ ಇರುತ್ತಾರೆ. ಇವರು ಇದ್ದಾಗ ಉಪಸಭಾಪತಿ ಬಂದು ಕೂರಲು ಹೇಗೆ ಸಾಧ್ಯ? ತುರ್ತು ಸಂದರ್ಭದಲ್ಲಿ ಸಭಾಪತಿ ಉಪಸಭಾಪತಿಗೆ ಕಲಾಪ ನಡೆಸಲು ಸೂಚಿಸಬೇಕು ಎಂಬುದು ನಿಯಮ ಆದರೆ ಬಿಜೆಪಿ ಸದಸ್ಯರು ಯಾವುದೇ ನಿಯಮ ಪಾಲಿಸಿಲ್ಲ. ಸಭಾಪತಿ ಸದನದೊಳಗೆ ಬರುವ ಬಾಗಿಲನ್ನೇ ಮುಚ್ಚಿ ಬೋಲ್ಟ್ ಹಾಕುತ್ತಾರೆ ಎಂದರೆ ಇದೆಂಥಾ ಗೂಂಡಾಗಿರಿ ಇರಬೇಕು ಎಂದು ಗುಡುಗಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ