Latest

*ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸುವವರು ಲೀಡರ್ ಅಲ್ವಾ?; 2 ಕ್ಷೇತ್ರಗಳ ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ*

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ನಾನು ಅಲೆಮಾರಿಯಲ್ಲ, 8 ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಮಯ್ಯ, ಎರಡು ಕ್ಷೇತ್ರಗಳಿಂದ ಸ್ಪರ್ಧೆಸುವ ವದಂತಿ ಬಗ್ಗೆಯೂ ಸ್ಪಷ್ಟನೆ ನೀಡಿದರು. ನಾನು ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಾಗಿ ಎಲ್ಲಿಯೂ ಹೇಳಿಲ್ಲ. ಒಂದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಕ್ಲೀಯರ್ ಆಗಿ ಹೇಳಿದ್ದೇನೆ ಎಂದರು.

ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸುವವರು ಲೀಡರ್ ಅಲ್ವಾ? ಪ್ರಧಾನಿ ಮೋದಿ 2 ಕ್ಷೇತ್ರಗಳಿಂದ ನಿಂತಿರಲಿಲ್ವಾ? ಜನರು ಎಲ್ಲಿ ಪ್ರೀತಿ ತೋರ್ತಾರೆ ಆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನಾನು ಎರಡೇ ದಿನ ಬಾದಾಮಿಗೆ ಬಂದರೂ ಗೆದ್ದಿದ್ದೇನೆ. 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಅಗ ರಾಜೀವ್ ಗಾಂಧಿ ಮೃತಪಟ್ಟ ಹಿನ್ನೆಲೆಯಲ್ಲಿ ಸೋಲಬೇಕಾಯ್ತು. ಕೊನೇ ಚುನಾವಣೆ ಅಂತಾ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಆದರೆ ಅಲ್ಲಿನ ಜನರು ನನ್ನನ್ನು ಸೋಲಿಸಿಬಿಟ್ರು. ಬಾದಾಮಿ ದೂರ ಆಗಿರೋದಕ್ಕೆ ಹತ್ತಿರದ ಸ್ಥಳಕ್ಕೆ ಹೊರಟಿದ್ದೇನೆ. ವಿಪಕ್ಷ ಸ್ಥಾನದಲ್ಲಿದ್ದರೂ ನಿರೀಕ್ಷೆಗೂ ಮೀರಿ ಕೆಲಸಗಳನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.

*ನಾನು ಇವರಂತೆ ಬಣ್ಣಬದಲಿಸುವ ರಾಜಕೀಯ ಗೋಸಂಬೆ ಅಲ್ಲ; ಬಿಜೆಪಿ ಶಾಸಕರ ವಿರುದ್ಧ ಮತ್ತೆವಾಗ್ದಾಳಿ ನಡೆಸಿದ ಬಿ.ಕೆ.ಹರಿಪ್ರಸಾದ್*

Home add -Advt

https://pragati.taskdun.com/b-k-hariprasadyatnal-bjp-govtbagalakote/

Related Articles

Back to top button