Politics

*ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯೇ? ಆರ್.ಅಶೋಕ್ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ: ಸ್ವಯಂಘೋಷಿತ ಸಂವಿಧಾನ ರಕ್ಷಕ ಸಿಎಂ ಸಿದ್ದರಾಮಯ್ಯನವರೇ ಬಿಜೆಪಿ ಪ್ರತಿಭಟನೆ ಹತ್ತಿಕ್ಕುತ್ತಿರುವುದು ಎಷ್ಟು ಸರಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ತಮ್ಮ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು @BJP4Karnataka ನಾಯಕರು ಮೈಸೂರಿಗೆ ಹೊರಟಿದ್ದರೆ, ಪೊಲೀಸರನ್ನು ಬಳಸಿಕೊಂಡು ನಮ್ಮನ್ನ ಮಾರ್ಗ ಮಧ್ಯದಲ್ಲೇ ತಡೆಯುವ ಮೂಲಕ ಸರ್ವಾಧಿಕಾರಿ ಧೋರಣೆ ಪ್ರದರ್ಶನ ಮಾಡುತ್ತಿದ್ದೀರಲ್ಲ ಎಂದು ಸಾರ್ಕಾರಕ್ಕೆ ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.

1.) ತಮ್ಮ ನಾಯಕ @RahulGandhi ಅವರು ಪ್ರದರ್ಶನ ಮಾಡುವ ಸಂವಿಧಾನದಲ್ಲಿ, ವಿಪಕ್ಷಗಳಿಗೆ ಹೋರಾಟ ಮಾಡುವ ಹಕ್ಕಿಲ್ಲವೇ?

2.) ತಮ್ಮ @INCIndia ಪಕ್ಷ ಪ್ರತಿಪಾದಿಸುವ ಪ್ರಜಾಪ್ರಭತ್ವದಲ್ಲಿ ವಿರೋಧ ಪಕ್ಷಗಳು ಸರ್ಕಾರವನ್ನ ಪ್ರಶ್ನಿಸುವುದು ಅಪರಾಧವೇ?

3.) ಪೊಲೀಸರನ್ನು ಬಳಸಿಕೊಂಡು ವಿಪಕ್ಷ ನಾಯಕರು ಪ್ರತಿಭಟನೆ ಮಾಡಲು ಮೈಸೂರಿಗೆ ಹೋಗುವುದನ್ನು ತಡೆಯುತ್ತಿದ್ದೀರಲ್ಲ, ಕರ್ನಾಟಕದಲ್ಲಿ ಏನು ಅಘೋಷಿತ ತುರ್ತು ಪರಿಸ್ಥಿತಿ ಇದೆಯೇ?

ತಮ್ಮ ಆತ್ಮಸಾಕ್ಷಿ ಶುದ್ಧವಾಗಿದ್ದರೆ, ತಾವು ಹೇಳಿಕೊಳ್ಳುವಂತೆ ತಾವು ಪ್ರಾಮಾಣಿಕರಾದರೆ, ಮುಡಾ ಹಗರಣವನ್ನ ಸಿಬಿಐಗೆ ಒಪ್ಪಿಸಿ. ನಿಮ್ಮ ತಪ್ಪಿಲ್ಲವಾದರೆ ಸಿಬಿಐಗೆ ಕೊಡಲು ಭಯವೇಕೆ? ಎಂದು ಕೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button