Kannada NewsKarnataka NewsLatest
*ಅನಂತ ಕುಮಾರ್ ಹೆಗಡೆ ಕ್ಷೇತ್ರಕ್ಕಾಗಿ ಏನು ಮಾಡಿದ್ದಾರೆ? ಸಿಎಂ ಸಿದ್ದರಾಮಯ್ಯ ಪ್ರಶ್ನೆ*
ಪ್ರಗತಿವಾಹಿನಿ ಸುದ್ದಿ: ಸಂಸದ ಅನಂತಕುಮಾರ್ ಹೆಗಡೆ ದ್ವೇಷ ಭಾಷಣ, ಸಿಎಂ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ವಿಚಾರವಾಗಿ ಬಿಜೆಪಿ ನಾಯಕರ ಸಮರ್ಥಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಂಸದ ಅನಂತ್ ಕುಮಾರ್ ಹೆಗಡೆ ಕ್ಷೇತ್ರಕ್ಕಾಗಿ ಏನಾದ್ರೂ ಮಾಡಿದ್ದಾರಾ? ಬಡವರ ಕಷ್ಟ ಕೇಳಿದ್ದಾರಾ? ಏನು ಮಾಡಿದ್ದಾರೆ ರಾಜಕೀಯಕ್ಕಾಗಿ ವಿವಾದ, ಧ್ವೇಷ ಭಾಷಣ ಮಾಡುವುದರಲ್ಲಿ ತೊಡಗಿರುವುದು ಎಷ್ಟು ಸರಿ? ಕ್ಷೇತ್ರದ ಜನರಿಗಾಗಿ ಅವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಇನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿ ಕೆಲ ಬಿಜೆಪಿ ನಾಯಕರು ಅನಂತ ಕುಮಾರ್ ಹೆಗಡೆ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರಹ್ಲಾದ್ ಜೋಶಿ ರಾಜಕೀಯವಾಗಿ ಆರೋಪ ಮಾಡುತ್ತಿದ್ದಾರೆ. ಹೇಳಿಕೆ ಸಮರ್ಥಿಸಿಕೊಂಡ್ರೆ ಅವರಿಗೂ ಸಂಸ್ಕೃತಿ ಇಲ್ಲ. ಮನುಷತ್ವ ಇಲ್ಲ ಎಂದರ್ಥ ಎಂದು ತಿರುಗೇಟು ನೀಡಿದ್ದಾರೆ.