Latest

ರೈಲು ನಿಲ್ದಾಣದ ಟಿವಿ ಪರದೆಯಲ್ಲಿ ಧುತ್ತನೆ ಬಿತ್ತರವಾಗಿ ಮುಜುಗರ ಹುಟ್ಟಿಸಿದ ಅಶ್ಲೀಲ ವಿಡಿಯೊ!

ಪ್ರಗತಿವಾಹಿನಿ ಸುದ್ದಿ ಪಟ್ನಾ: ಮೊಬೈಲ್ ಗಳಲ್ಲಿ ಕದ್ದು ಅಶ್ಲೀಲ ವಿಡಿಯೋ ವೀಕ್ಷಿಸಿ ಸಿಕ್ಕಿಬಿದ್ದು ಮುಜುಗರಕ್ಕೀಡಾದವರು ಅನೇಕರಿದ್ದಾರೆ. ಆದರೆ ಸಾವಿರಾರು ಪ್ರಯಾಣಿಕರು ಇರುವ ರೈಲು ನಿಲ್ದಾಣದಲ್ಲಿ ಸಾರ್ವಜನಿಕರ ವೀಕ್ಷಣೆಗಿಟ್ಟ ಜಾಹೀರಾತು ಪರದೆ ಮೇಲೆ ಖುಲ್ಲಂಖುಲ್ಲಾ ಅಶ್ಲೀಲ ವಿಡಿಯೊ ಪ್ರಸಾರವಾಗಿಬಿಟ್ಟರೆ ಹೇಗಾಗಬೇಡ?

ಅಂಥದ್ದೊಂದು ಮುಜುಗರದ ಸಂಗತಿ ಬಿಹಾರದ ಪಟ್ನಾ ರೈಲು ನಿಲ್ದಾಣದಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನ ಜನ ಮಾಹಿತಿಗಾಗಿ ವೀಕ್ಷಿಸುತ್ತಿದ್ದರೆ ಏಕಾಏಕಿ ಅಶ್ಲೀಲ ವಿಡಿಯೊ ಶುರುವಾಗಿದೆ. ಒಂಟಿ ಹೈದರೆಲ್ಲ ತುಂಟತನದಿಂದ ಕಣ್ಣಿಟ್ಟರೆ ಕುಟುಂಬ ಸಹಿತ ಬಂದ ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ. ಬರೊಬ್ಬರಿ ಮೂರು ನಿಮಿಷ ಅಶ್ಲೀಲ ವೀಡಿಯೊ ಪ್ರಸಾರವಾಗಿದ್ದು ಮಹಿಳೆಯರೆಲ್ಲ ಮುಖ ಕಿವುಚಿ “ಛೀ..” ಎಂದಿದ್ದಾರೆ.

ಅನಿರೀಕ್ಷಿತವಾದ ಈ ಮುಜುಗರದ ಬೆಳವಣಿಗೆಯಿಂದ ರೈಲ್ವೆ ನಿಲ್ದಾಣದ ಸಿಬ್ಬಂದಿ ಕೂಡ ಬಾಲಸುಟ್ಟ ಬೆಕ್ಕಿನಂತೆ ಅತ್ತಿಂದಿತ್ತ ಓಡಾಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸರು ಟಿವಿ ಆಫ್ ಮಾಡಿಸಿ ಬಹಿರಂಗ ಶೃಂಗಾರ ಲೀಲೆಗೆ ಮುಸುಕು ಮುಚ್ಚಿದ್ದಾರೆ. ಇದೇ ವೇಳೆ ಜಾಹಿರಾತು ಗುತ್ತಿಗೆಯನ್ನು ರದ್ದುಪಡಿಸಿ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

https://pragati.taskdun.com/the-touch-of-sun-rays-to-linga-in-katti-basaveshwara-temple/
https://pragati.taskdun.com/two-workers-who-went-to-clean-the-drain-died/

Home add -Advt
https://pragati.taskdun.com/mudalagi-is-a-mantra-of-unity-peace-harmony/

Related Articles

Back to top button