Latest

*ನಾನು ಹಿಂದೂ ವಿರೋಧಿಯಲ್ಲ, ಹಿಂದುತ್ವದ ವಿರೋಧಿ ಎಂದ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿಯಿಂದ ನನ್ನ ತೇಜೋವಧೆಗೆ ಯತ್ನಿಸಲಾಗುತ್ತಿದೆ. ಅವರ ದುರುದ್ದೇಶ, ಹುನ್ನಾರ ಎಲ್ಲರಿಗೂ ಅರ್ಥವಾಗುತ್ತದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಿದ್ದು ನಿಜ ಕನಸುಗಳು ಎಂಬ ಪುಸ್ತಕ ಬಿಡುಗಡೆ ಮಾಡಲು ಸಜ್ಜಾಗಿರುವ ಬಿಜೆಪಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಬಿಜೆಪಿ ನಾಯಕರಿಮ್ದ ನನ್ನನ್ನು ಹಣಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಹಿಂದೂ ವಿರೋಧಿಯಲ್ಲ, ಹಿಂದುತ್ವದ ವಿರೋಧಿ. ಹಿಂದೂ ಧರ್ಮ ಬೇರೆ, ಹಿಂದುತ್ವ ಬೇರೆ. ನಾನು ಹಿಂದೂನೆ ಅಲ್ವಾ? ಹಿಂದೂ ವಿರೋಧಿ ಹೇಗೆ ಆಗುತ್ತೇನೆ? ನಾನು ಹಿಂದೂ ಧರ್ಮದ ಪರ ಇದ್ದೇನೆ. ಎಲ್ಲ ದರ್ಮದ ಪರವಾಗಿಯೂ ಇದ್ದೇನೆ ಎಂದು ಹೇಳಿದರು.

Related Articles
Home add -Advt

ಬಿಜೆಪಿ ನಾಯಕರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಸ್ಟ್ರಾಂಗ್ ಇರೋದಕ್ಕೆ ಬಿಜೆಪಿಯವರು ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಯಾರು ಸ್ಟ್ರಾಂಗ್ ಇರ್ತಾರೆ ಅವರಿಗೆ ಉದ್ದೇಶಪೂರ್ವಕವಾಗಿ ತೊಂದರೆ ಕೊಡುವುದೇ ಅವರ ಕೆಲಸ. ಬಿಜೆಪಿ ಅವರು ನನ್ನ ತೇಜೋವಧೆ ಮಾಡುತ್ತಿದ್ದಾರೆ. ಅವರ ದುರುದ್ದೇಶ, ಹುನ್ನಾರ ಜನರಿಗೆ ಅರ್ಥವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

*ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ*

https://pragati.taskdun.com/siddu-nija-kanasugalubook-releasebjpdefamation-casesiddaramaiah/

Related Articles

Back to top button