ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಮ್ಮನ್ನು ಸಿದ್ರಾಮುಲ್ಲಾಖಾನ್ ಎಂದು ಕರೆದಿದ್ದ ಬಿಜೆಪಿ ನಾಯಕರ ಹೇಳಿಕೆಗೆ ಈವರೆಗೆ ಮೌನವಾಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಮೌನಮುರಿದಿದ್ದು, ಇದು ಬಿಜೆಪಿ ನಾಯಕರ ಸೋಲು, ಹತಾಶೆ, ಅಸಹಾಯಕತೆಯನ್ನು ತೋರುತ್ತದೆ ಎಂದು ಟಾಂಗ್ ನೀಡಿದ್ದಾರೆ.
ಅನ್ನರಾಮಯ್ಯ, ರೈತರಾಮಯ್ಯ, ಕನ್ನಡ ರಾಮಯ್ಯ ಎಂದೆಲ್ಲ ಜನರು ನನ್ನನ್ನು ಕರೆಯುತ್ತಾರೆ. ಮುಸ್ಲಿಂ ಸಮುದಾಯಕ್ಕೆ ನಾನು ಮಾಡಿದ ಕೆಲಸ ಗುರುತಿಸಿ ಸಿದ್ರಾಮುಲ್ಲಾಖಾನ್ ಎಂದು ಕರೆದರೆ ಖುಷಿಯಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮುಸ್ಲಿಂ ಕುಟುಂಬದಲ್ಲಿ ಹುಟ್ಟಿ ಗೋವಿಂದ ಭಟ್ಟರ ಶಿಷ್ಯನಾಗಿ ಈಗಲೂ ನಮ್ಮ ಆತ್ಮಸಾಕ್ಷಿಯನ್ನು ಎಚ್ಚರಿಸುತ್ತಲೇ ಇದೆ. ಅಂತಹ ಸಂತ ಶಿಷುನಾಳ ಶರೀಫರ ಪರಂಪರೆ ನಮ್ಮದು ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಆದರೆ ಬಿಜೆಪಿ ನಾಯಕರು ಶೂನ್ಯ ಸಾಧನೆ, ಭ್ರಷ್ಟಾಚಾರ, ಅನಾಚಾರಗಳ ಮಸಿಬಳಿದುಕೊಂಡಿದ್ದಾರೆ. ಇಂತಹ ಮುಖವಿಟ್ಟುಕೊಂಡು ಮತಯಾಚನೆ ಮಾಡಲು ಹೇಗೆ ಸಾಧ್ಯ? ನನ್ನ ಹೆಸರಿಗೆ ಸಿದ್ರಾಮುಲ್ಲಾಖಾನ್ ಎಂದು ಸೇರಿಸಿದ್ದಕ್ಕೆ ಬೇಸರವಿಲ್ಲ. ಇದು ಬಿಜೆಪಿಯವರ ಸೋಲು, ಹತಾಶೆ ಹಾಗೂ ಅಸಹಾಯಕತೆ ತೋರುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯ ರಾಜಕೀಯದಲ್ಲಿ ತಾರಕಕ್ಕೇರಿದ ಮುಲ್ಲಾ, ಖಾನ್ ವಾರ್
https://pragati.taskdun.com/bjpcongressmullakhan-politicsc-t-ravisiddaramaiah/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ