ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂಬ ಉನ್ನತ ಶಿಕ್ಷನ ಸಚಿವ ಅಶ್ವತ್ಥನಾರಾಯಣ ಹೇಳಿಕೆ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ರೋಷಾವೇಶಕ್ಕೆ ಕಾರಣವಾಯಿತು.
ವಿಧಾನಸಭೆಯಲ್ಲಿ ಸಚಿವರ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಯಾವ ಧರ್ಮವೂ ಹೊಡಿ, ಬಡಿ ಎಂದು ಹೇಳಲ್ಲ, ಸಚಿವ ಅಶ್ವತ್ಥನಾರಾಯಣ ಅವರು ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಕರೆ ನೀಡಿದ್ದಾರೆ. ಸಚಿವರೊಬ್ಬರಿ ಬಹಿರಂಗವಾಗಿ ಪ್ರಚೋದನಕಾರಿ ಹೇಳಿಕೆ ಕೊಟ್ಟರು ಯಾವುದೇ ಕ್ರಮ ಕೈಗೊಂಡಿಲ್ಲ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ನಿಮ್ಮ ಇಲಾಖೆ ಸತ್ತು ಹೋಗಿದೆ. ನೀವು ಅಸಮರ್ಥ ಸಚಿವರಾಗಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಗೃಹ ಇಲಾಖೆ ನಿರ್ವಹಿಸಲು ನಾನು ಸಮರ್ಥನಾಗಿದ್ದೇನೆ. ನಿಮ್ಮ ಅವಧಿಯಲ್ಲಿನ ಇಲಾಖೆ ನಿರ್ವಹಣೆಗಿಂತ ನಾನು ಸಮರ್ಥವಾಗಿ ಇಲಾಖೆ ನಿರ್ವಹಿಸಿದ್ದೇನೆ ಎಂದು ಹೇಳಿದರು. ಅದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಸಮರ್ಥರಾಗಿದ್ದರೆ ಅಶ್ವತ್ಥನಾರಾಯಣ ವಿರುದ್ಧ ಕ್ರಮ ಕೈಗೊಳ್ಳಿ, ಯಾಕೆ ಕೈಗೊಂಡಿಲ್ಲ? ಅಶ್ವತ್ಥನಾರಾಯಣ ಹೇಳಿಕೆ ಪ್ರಚೋದನಕಾರಿ ಹೌದೋ ಅಲ್ವೋ? ಎಂದು ಗುಡುಗಿದರು.
ಹೋಡೆದು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ ಮಾತ್ರಕ್ಕೆ ನಾನು ಹೆದರಲ್ಲ, ತಾಕತ್ತಿದ್ದರೆ, ಧಮ್ ಇದ್ದರೆ ನನ್ನನ್ನು ಹೊಡೆದು ಹಾಕಿ ನೋಡೋಣ. ನಾನು ಎದುರಿಸಲು ಸಿದ್ಧನಿದ್ದೇನೆ. ಬರಿ ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ, ನಿಮ್ಮೆ ಬೆದರಿಕೆಗಳಿಗೆ ನಮ್ಮ ನಿಲುವು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ, ಬದಲಾಯಿಸಿಕೊಳ್ಳುವುದೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಸಚಿವರು ಹೇಳಿದ್ದು ರಾಜಕೀಯವಾಗಿ ಹೊಡೆದುಹಾಕಬೇಕು ಎಂದು ಚುನಾವಣೆ ವಿಚಾರವಗಿ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು. ಒಟ್ಟಾರೆ ಸಚಿವ ಅಶ್ವತ್ಥನಾರಾಯಣ ಹೇಳಿಕೆ ಸದನದಲ್ಲಿ ಕೋಲಾಹಲಕ್ಕೆ ಕಾರಣವಾದ ಪ್ರಸಂಗ ನಡೆಯಿತು.
*BREAKING: ಕಿತ್ತಾಟ ಪ್ರಕರಣ; ಮೂವರು ಅಧಿಕಾರಿಗಳ ತಲೆದಂಡ; ಡಿ.ರೂಪಾ, ರೋಹಿಣಿಗೆ ಸ್ಥಳ ನಿಯೋಜಿಸದೇ ವರ್ಗಾವಣೆ*
https://pragati.taskdun.com/d-rooparohini-sindhurimunish-moudgiltransfer/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ