Latest

ಲಸಿಕೆ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದ ವಿಪಕ್ಷ ನಾಯಕ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ಪ್ರಧಾನಿ ಮೋದಿ ಹಾಕುತ್ತಿರುವುದು ನಾಟಕದ ಕಣ್ಣೀರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ಮೋದಿ ಕಣ್ಣೀರು ಹಾಕಿದಂತೆ ನಾಟಕವಾಡುತ್ತ ಜನರಿಗೆ ಮೋಸ ಮಾಡುತ್ತಿದ್ದಾರೆ. ಚಪ್ಪಾಳೆ, ಜಾಗಟೆ, ತಟ್ಟೆ ಬಡಿಯುವುದರಿಂದ ಕೊರೊನಾ ಓಡಿಸಲಾಗದು. ಜನರು ಮೋದಿ ಕಣ್ಣೀರ ನಾಟಕ ನೋಡಿ ಮೋಸ ಹೋಗಬಾರದು ಎಂದರು.

ರಾಜ್ಯದಲ್ಲಿ ಕೊರೊನಾ ನಡುವೆ ಈಗ ಬ್ಲ್ಯಾಕ್ ಫಂಗಸ್ ಹೆಚ್ಚುತ್ತಿದೆ. 300 ಜನರಲ್ಲಿ ಫಂಗಸ್ ಪತ್ತೆಯಾಗಿದೆ. ಮಧುಮೇಹಿಗಳಲ್ಲಿ ಇದು ಬರುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಅಗತ್ಯವಿರುವ ಔಷಧಿಯೂ ಸಿಗುತ್ತಿಲ್ಲ. ಔಷಧವೇ ಇಲ್ಲದೇ ಜನರು ಸಾವನ್ನಪ್ಪುತ್ತಿದ್ದಾರೆ. ಆದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

ಕೊರೊನಾ ಲಸಿಕೆ ಪೂರೈಕೆಯಾಗಿದೆ ಎಂದು ಹೇಳಿ ಲಸಿಕೆ ಅಭಿಯಾನವನ್ನು ಆರಂಭಿಸಲಾಗಿದೆ. ಈಗ ಯಾರಿಗೂ ಲಸಿಕೆಯೇ ಸಿಗುತ್ತಿಲ್ಲ. ರಾಜ್ಯಕ್ಕೆ 8 ಕೋಟಿ ಲಸಿಕೆ ಅಗತ್ಯವಿದೆ. ಈವರೆಗೂ ಸರಿಯಾಗಿ ಲಸಿಕೆ ನೀಡಿಕೆ ಆರಂಭವಾಗಿಲ್ಲ. ರಾಜ್ಯಕ್ಕೆ ನೀಡಿರುವ ಲಸಿಕೆ ಪ್ರಮಾಣ ಎಷ್ಟು, ಸರ್ಕಾರ ಹಂಚಿರುವ ಡೋಸ್ ಎಷ್ಟು ಎಲ್ಲದರ ಬಗ್ಗೆಯೂ ಮೊದಲು ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.

ಪೊಲೀಸರಿಗೆ ಈಗ ಫುಲ್ ಪವರ್

ಬ್ಲ್ಯಾಕ್ & ವೈಟ್ ಆಯ್ತು, ಈಗ ಯಲ್ಲೋ ಫಂಗಸ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button