Latest

ಸಿದ್ದರಾಮೋತ್ಸವ ಯಶಸ್ಸಿಗೆ ಪೂರ್ವಭಾವಿ ಸಭೆ: ರಾಜ್ಯ ಘಟಕದ ರಾಜ್ಯಾಧ್ಯಕ್ಷರಾಗಿ ಗಿರೀಶ್ ಗದಿಗೆಪ್ಪಗೌಡರ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ : ಮಾಜಿ ಸಿಎಂ ಸಿದ್ದರಾಮಯ್ಯನವರ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಹಿರಿಯ ರಾಜಕಾರಣಿ ಸಿದ್ದರಾಮಯ್ಯನವರು ನಡೆದ ಬಂದ ದಾರಿಯನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ‘ಸಿದ್ದರಾಮಯ್ಯನವರ ಅಭಿಮಾನಿ ಬಳಗ’ ಹೆಸರಿನ ಸರ್ವಧರ್ಮ ಸಮನ್ವಯತೆಯ ಸಂಘಟನೆಯೊಂದನ್ನು  ಅಸ್ತಿತ್ವಕ್ಕೆ ತರಲಾಗಿದೆ.

ಸಿದ್ದರಾಮೋತ್ಸವದ ಅಂಗವಾಗಿ ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಗುರುವಾರ  ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಜಾತಿ, ಮತ ಭೇದವಿಲ್ಲದೇ ಸರ್ವಧರ್ಮದ ಸಮನ್ವಯತೆಯಿಂದ ಸಿದ್ದರಾಮಯ್ಯನವರ ಚಿಂತನೆ ಹಾಗೂ ಆದರ್ಶಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಹಿನ್ನೆಲೆಯಲ್ಲಿ  ಅವರ ಅಭಿಮಾನಿ ಬಳಗ ಸಂಘಟನೆಯನ್ನು ಹುಟ್ಟು ಹಾಕಲಾಗಿದೆ.

ರಾಜ್ಯ ಘಟಕದ ರಾಜ್ಯಾಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ  ಗಿರೀಶ್ ಜಿ.ಗದಿಗೆಪ್ಪಗೌಡರ ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಪ್ರವೀಣ ಅಪ್ಪಸಾಹೇಬ ಕಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ವಿಜನಗೌಡ ಹನುಮಂತಗೌಡ ಪಾಟೀಲ, ಖಜಾಂಚಿಯಾಗಿ ಗಣೇಶ ಶಂಕರಪ್ಪ ಕದಡಿ, ನಿರ್ದೇಶಕರಾಗಿ ವೀರಭದ್ರಪ್ಪ ಶೇಖಪ್ಪ ಅಸುಂಡಿ, ಅಝಾರುದ್ದಿನ್ ಮುಕ್ತುಮ್ ಹುಸೇನ್ ಮನಿಯಾರ್, ಝಾಕೀರ್ ಹುಸೇನ್ ಖಾಜಾಸಾಬ ಮೊರಬ, ಶಿವಾನಂದ ಬಸವಣ್ಣೆಪ್ಪ ಮಮ್ಮಿಗಟ್ಟಿ, ದಿವಾನಸಾಬ ದಾವಲಸಾಬ ನದಾಫ್, ಹಜರತ್ ಮೈನುದ್ದೀನ್ ಮುನಸಿ, ಪಾಲಿಕೆ ಮಾಜಿ ಸದಸ್ಯರಾದ ಆನಂದ ಶಂಕರ್ ಸಿಂಗನಾಥ್, ಹರ್ಷವರ್ಧನ ನೀಲಕಂಠ ಮಲಕಣ್ಣವರ ಆಯ್ಕೆಯಾಗಿದ್ದಾರೆ. ಈ ಕುರಿತು ಪಾಲಿಕೆ ಮಾಜಿ ಸದಸ್ಯರು ಹಾಗೂ ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಿಜಯನಗೌಡ ಹನುಮಂತಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

10 ಲಕ್ಷ ರೂಪಾಯಿಗಳ ಪರಿಹಾರ ಚೆಕ್ ವಿತರಿಸಿದ ಸಚಿವೆ ಶಶಿಕಲಾ ಜೊಲ್ಲೆ

Related Articles

Back to top button