Kannada NewsLatest

ಭಾರತೀಯರು ಸ-ಹೃದಯಿಗಳು, ಪ್ರೀತಿಯ ಪ್ರತೀಕರು : ಶ್ರೀ ಸಿದ್ದೇಶ್ವರ ಸ್ವಾಮಿಜಿ

ಪ್ರಗತಿವಾಹಿನಿ ಸುದ್ದಿ; ಮುಗಳಖೋಡ:  ಯಾವ ವ್ಯಕ್ತಿ ಸಿಹಿ ಮನಸ್ಸಿನಿಂದ ತುಂಬು ಹೃದಯದ ಪ್ರೀತಿ ಮತ್ತು ಭಕ್ತಿ ಭಾವದಿಂದ ಬೇರೆ ವ್ಯಕ್ತಿಗಳನ್ನು ಗೌರವಿಸುವರವು  ದೇವರಿಗೆ ಹತ್ತಿರ ಇರುವರು.

ಮತ್ತು ತಂದೆ ತಾಯಿ,  ಹಿರಿಯರು , ಶರಣರಿಗೆ  ಪೂಜ್ಯ ಭಾವದಿಂದ ನೋಡಿ ಧಾರ್ಮಿಕತೆ ಬೇಳೆಸುವ ಜನರೆ ಭಾರತೀಯರು ಎಂದು ವಿಜಯಪೂರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮಿಜಿ ಹೇಳಿದರು.

ಅವರು ಮುಗಳಖೋಡ ಪಟ್ಟಣದ ಚವಿವ ಸಂಘದ ಆವರಣದಲ್ಲಿರುವ ಸಾಯಿ ಪ್ರತಿಷ್ಠಾಪನೆಯ ದಶಮಾನೋತ್ಸವ ಹಾಗೂ ನೂತನ ಕಟ್ಟಡದ ಕಳಸಾರೋಹಣ ಕಾರ್ಯಕ್ರಮದ  3 ನೇ ದಿನ ಶ್ರೀ ಸಾಯಿ ಮೂರ್ತಿಗೆ ಕಿರೀಟಧಾರಣೆ ಮಾಡಿ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿದ, ಅವರು ಇಂದಿನ ಮಕ್ಕಳಿಗೆ ಶಿಕ್ಷಣದ ಜತೆಗೆ ಆಧ್ಯಾತ್ಮಿಕ ಶಿಕ್ಷಣವನ್ನು ಒದಗಿಸುವ  ಮುಂದಿನ ಭವಿಷ್ಯದ ನಿರ್ಮಾಣಕ್ಕಾಗಿ ನಗುಮುಕದಿಂದ ಶಿಕ್ಷಣ ಆಲಿಸಲು ಬಂದಿರುವ ಮುದ್ದು ವಿದ್ಯಾರ್ಥಿಗಳೆ ದೇವರು. ನಾವು ಮಾಡುವ ಕಾರ್ಯವೆ ದೇವರು, ನಾವು ಜನರಿಗೆ ತೋರಿಸುವ ಪ್ರೀತಿಯೇ ದೇವರು, ನಮ್ಮ ಸರಳತೆಯೇ ದೇವರು ಎಲ್ಲರೂ ನಮ್ಮ ನಮ್ಮ ಕಾಯಕದಲ್ಲಿ ದೇವರನ್ನು ಕಾಣುತ್ತೇವೆ.  ಇಲ್ಲಿ ಎಲ್ಲವೂ ನಿನ್ನದಲ್ಲಾ ಎಲ್ಲವೂ ಅವನದ್ದೆ, ನಾವು ದೇವನ ಅತಿಥಿಗಳು ಮಾತ್ರ ನಾವೆಲ್ಲರೂ ಭಕ್ತರಾಗಿ ಸೇವೆ ಮಾಡುತ್ತಾ ನಗು ನಗೂತಾ ಇರಬೇಕು ಈ ದಾರಿಯಲ್ಲಿ ಸಾಗವುವನೆ ಪೂಜ್ಯನಾಗುತ್ತಾನೆ ನಾವು ಅವನನ್ನು    ಆರಾಧಿಸಬೇಕು. ಋಷಿ ಮುನಿಗಳು, ಜ್ಞಾನಿ ಶ್ರೇಷ್ಠ ವ್ಯಕ್ತಿ ಗಳು ಭಾರತದಲ್ಲಿ ಮಾತ್ರ ಹುಟ್ಟಿದ್ದಾರೆ ಆದ್ದರಿಂದ ಭಾರತೀಯರು ಹೊರಗೆ ಬಡವರು ಮನ ಬಲ್ಲಿದವರು  ಸ್ವಚ್ಛ ಸುಂದರ ಹೃದಯವಂತರಿರುವದರಿಂದ ದೇವರ ದೇಶ ಭಾರತ ಎಂದು ಜಗತ್ತು ಕೊಂಡಾಡುತ್ತಿದೆ ಈ ಮಣ್ಣಿನಲ್ಲಿ ಹುಟ್ಟಿದ ನಾವು ಧನ್ಯರು. ತಲೆಗೆ ಜ್ಞಾನ ಹೃದಯ ವೈಶಾಲತೆ ಕೈಯಲ್ಲಿ ಕೌಶಲ್ಯ ತುಂಬುವುದು ಎಲ್ಲರಲ್ಲಿ ಬರಬೇಕು. ಮುಗಳಖೋಡ ಒಳ್ಳೆಯ ಹೆಸರು ಪಡೆದ ಧಾರ್ಮಿಕ ಕೇಂದ್ರ ಇಲ್ಲಿ ಜನ್ಮ ತಾಳಿದ ನಿವು ಪುಣ್ಯವಂತರು ಆದ್ದರಿಂದ  ಸುಂದರ ಜೀವನ ಸಾಗಿಸಲು ಬಂದಂತಹ ಸಂತರು ನಾವು   ನಮ್ಮ ಮುಖ ಯಾವತ್ತೂ ಅರಳುತ್ತಿರಬೇಕು ಸತ್ಸಂಗದ ಜೀವನ ನಿಮ್ಮದಾಗಿರಲಿ ಎಂದು ಆರ್ಶೀವಚನ ನಿಡಿದರು

ಈ ಸಂದರ್ಭದಲ್ಲಿ ಪ.ಪೂಜ್ಯ ಬಸವರಾಜೇಂದ್ರ ಮಹಾಸ್ವಾಮಿಗಳು, ವಿವಿದ ಮಠದ ಮಠಾದೀಶರು, ಸ್ವಾಮಿಜಿಗಳು, ಮಾಜಿ ಜಿಪಂ ಸದಸ್ಯ  ಡಾ!! ಸಿ.ಬಿ ಕುಲಿಗೋಡ ಚವಿವ ಸಂಘದ ಅಧ್ಯಕ್ಷ ಸಂಜಯ ಕುಲಿಗೋಡ, ಖ್ಯಾತ ವೈದ್ಯ ಸಂತೋಷ ಕುಲಿಗೋಡ,  ಮಹಾಂತೇಶ ಕುಲಿಗೋಡ, ಗಣಪತಿ ಕುಲಿಗೋಡ, ಪ್ರಕಾಶ ಆದಪ್ಪಗೋಳ, ಪರಪ್ಪ ಖೇತಗೌಡರ, ಶಿವಪುತ್ರ ಯಡವಣ್ಣವರ, ರಮೇಶ ಯಡವಣ್ಣವರ, ಗೌಡಪ್ಪ ಖೇತಗೌಡರ, ಕೃಷ್ಣರಾವ್ ನಾಯಕ್, ಮಹಾವೀರ ಕುರಾಡೆ, ಎಸ್ ಎಸ್ ಮದಾಳೆ ಮತ್ತಿತರರು ಉಪಸ್ಥಿತರಿದ್ದರು.  ಕಾರ್ಯಕ್ರಮವನ್ನು ಜೆಪಿ ಮೊಗವೀರ್ ನಿರೂಪಿಸಿದರು,  ಪ್ರಾಚಾರ್ಯ ಎಂ.ಕೆ. ಬೀಳಗಿ ಸ್ವಾಗತಿಸಿ ವಂದಿಸಿದರು.
ಡೋಲೊ ಅಕ್ರಮಗಳ ತನಿಖೆಗೆ ಸಮಿತಿ ರಚನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button