Kannada NewsLatest

ಈ ಪಾರ್ಕ್ ನಲ್ಲಿ ನೋ ಜಾಗಿಂಗ್, ನೋ ರನ್ನಿಂಗ್.. ನಡೆದು ಉಲ್ಟಾ ಸುತ್ತುವಂತೆಯೂ ಇಲ್ಲ !

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಈ ಪಾರ್ಕ್ ನಲ್ಲಿ ಜಾಗಿಂಗ್ ಮಾಡುವಂತಿಲ್ಲ, ಓಡುವಂತೆಯೂ ಇಲ್ಲ. ಉಲ್ಟಾ (Anti Clockwise) ನಡೆದಾಡುವಂತೆಯೂ ಇಲ್ಲ !  ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆದೇಶ !!

ರಾಜಧಾನಿಯ ಪಾರ್ಕ್ ಒಂದರಲ್ಲಿ ಅಳವಡಿಸಿರುವ ಈ ಫಲಕ ಜಾಲತಾಣಗಳಲ್ಲಿ ಭಾರೀ ಲೇವಡಿಗೆ ಕಾರಣವಾಗಿದೆ. ಜಾಲತಾಣಗಳಲ್ಲಿ ಈ ಫಲಕದ ಬಗ್ಗೆ ವ್ಯಾಪಕವಾದ ಚರ್ಚೆಗಳು ಪ್ರತಿಕ್ರಿಯೆಗಳು ಹರಿದಾಡುತ್ತಿದ್ದು  ಬಹುತೇಕ ಜನರು ಬಿಬಿಎಂಪಿಗೆ  ವಿಡಂಬನಾತ್ಮಕ ಪ್ರಶ್ನೆಗಳನ್ನೇ ಕೇಳಿದ್ದಾರೆ.

ನೆಟ್ಟಿಗರೊಬ್ಬರು “ಜಾಗಿಂಗ್, ವಾಕಿಂಗ್, ನಡೆದಾಟ ಯಾವುದೂ ಮಾಡದೆ ಮತ್ತೇನು ಈ ಪಾರ್ಕಲ್ಲಿ ನಾಗಿಣಿ ನೃತ್ಯ ಮಾಡಬೇಕಾ?” ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಪ್ರತಿಕ್ರಿಯಿಸಿ “ಅಪ್ರದಕ್ಷಿಣೆ ಹಾಕುವುದು ಬೇಡ ಅಂದ್ರೆ ಕ್ಲಾಕ್ ವೈಸ್ ನಡೆಯಬಹುದಾ” ಎಂದೆಲ್ಲ ಪ್ರಶ್ನಿಸಿದ್ದಾರೆ. ಕೆಲವರು ಈ ರೀತಿಯ ಫಲಕ ಅಳವಡಿಸಿದ ಬಿಬಿಎಂಪಿಯ ಉದ್ದೇಶವಾದರೂ ಏನು ಎಂದು ಕೇಳಿದ್ದಾರೆ.

ಒಟ್ಟಿನಲ್ಲಿ  ಸಾರಾಸಗಟು ವಿಚಾರ ಮಾಡದೆ  ಈ ಫಲಕ ಅಳವಡಿಸಿ ಬಿಬಿಎಂಪಿ ಅಪಹಾಸ್ಯಕ್ಕೀಡಾಗಿದೆ. ಅಷ್ಟೇ ಅಲ್ಲ, ಕರ್ನಾಟಕದ ರಾಜಧಾನಿಯಲ್ಲೇ ಕನ್ನಡ ಭಾಷೆ ಬಳಸದೆ ಇಂಗ್ಲಿಷ್ ಫಲಕ ಅಳವಡಿಸಿರುವುದು ಕನ್ನಡಾಭಿಮಾನಿಗಳ ಕಣ್ಣು ಕೆಂಪಾಗಿಸಿದೆ.

Home add -Advt

ಕಿಕ್ ಬಾಕ್ಸಿಂಗ್ ಸ್ಪರ್ಧೆ; ಗಾಯಗೊಂಡಿದ್ದ ಯುವಕ ಸಾವು

Related Articles

Back to top button