Belagavi NewsBelgaum NewsElection NewsKannada NewsKarnataka NewsPolitics

*ರಾಜ್ಯದಲ್ಲಿ ಬಿಜೆಪಿಗೆ ಸಿಂಗಲ್ ಡಿಜಿಟ್: ಕೇಂದ್ರದಲ್ಲೂ ಸರ್ಕಾರ ಬದಲಾಗುತ್ತೆ ಎಂದ ಸಚಿವ ರಾಮಲಿಂಗ ರೆಡ್ಡಿ*

ಪ್ರಗತಿವಾಹಿನಿ ಸುದ್ದಿ: ಹಗಲು ಕನಸು ಕಂಡವರಿಗೆ ನಾವು ಬೇಡ ಅನ್ನೋಕ್ಕೆ ಆಗುತ್ತಾ? ಅವರು ಕನಸು ಕಾಣಲಿ ಬಿಡಿ.‌ ನಾಲ್ಕರಂದು ರಿಸಲ್ಟ್ ಬರುತ್ತೆ. ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಗೆ ಎಷ್ಟು ಬರುತ್ತೆ ಅನ್ನೋದು ಗೊತ್ತಾಗುತ್ತೆ. ಬಿಜೆಪಿಯವರದ್ದು ಸಿಂಗಲ್ ಡಿಜಿಟ್ ಬರುತ್ತೆ. ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರ ಬರೋ ಹಾಗೆ ಕಾಣ್ತಿಲ್ಲ, ಕೇಂದ್ರದಲ್ಲಿ ಸರ್ಕಾರ ಬದಲಾಗುತ್ತೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.‌

ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೀವು ಟಿವಿಯಲ್ಲಿ ಪೇಪರ್ ನಲ್ಲಿ ತೋರಸ್ತೀರಿ ಅದಕ್ಕೆ ಅವರು ಹೇಳುತ್ತಾರೆ. ನೀವು ತೋರಿಸುವುದರಿಂದ ಅವರು ಹೇಳುತ್ತಾರೆ ಅಷ್ಟೇ ಎಂದು 136ಶಾಸಕರಿದ್ದರೂ ಸರ್ಕಾರ ಬಿಳ್ಳುತ್ತೆ ಎಂಬ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.‌

ಮಹಾರಾಷ್ಟ್ರ ಸರ್ಕಾರ ಮಾದರಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ವಿಚಾರವಾಗಿ ಮಾತನಾಡಿದ ಅವರು, ಅವರು ಹೇಳ್ತಾರೆ ಅವರು ಹೇಳುವ ಮಾತಿಗೆ ಯಾಕೆ ಬೆಲೆ ಕೊಡ್ತೀರಾ? ನಮ್ಮ ಸರ್ಕಾರ ಸುಭದ್ರವಾಗಿರುತ್ತೆ, ಏನು ಆಗಲ್ಲ. ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ಸರ್ಕಾರ ಮಾಡುತ್ತಿದ್ದರು.‌ ನಮ್ಮಲ್ಲಿ ಒಂದೇ ಪಕ್ಷ ಸರ್ಕಾರ ಮಾಡುತ್ತಿದೆ, ನಮ್ಮಲ್ಲಿ ಒಗ್ಗಟ್ಟು ಇದೆ. ಚುನಾವಣೆ ಬಳಿಕ ಅವರ ಪಕ್ಷದಲ್ಲಿ ಎಷ್ಟು ಜನ ಇರ್ತಾರೋ ಅವರು ನೋಡಿಕೊಳ್ಳಬೇಕು. ಚುನಾವಣೆ ಆದ್ಮೇಲೆ ಅವರ ಪಕ್ಷದಲ್ಲಿ ಎಷ್ಟು ಜನ ಪಕ್ಷಾಂತರ ಮಾಡುತ್ತಾರೆ ಅವರು ಬಂದೋಬಸ್ತ್ ಮಾಡಿಕೊಳ್ಳಬೇಕು. ನಾವು ಮಾಡಲ್ಲ, ನಮಗೆ ಅವಶ್ಯಕತೆ ಇಲ್ಲ, ಅವರು ಸೋತರೆ, ಓಡಿಹೋಗುತ್ತಾರೆ, ನಮ್ಮವರೂ ಯಾರು ಬಿಜೆಪಿಗೆ ಹೋಗಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.‌

ಬಿಜೆಪಿಯವರು ಎಷ್ಟು ಜನ ಬರ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಿಸಲ್ಟ್ ಬಂದ್ಮೇಲೆ ಬಿಜೆಪಿಗೆ ಸಿಂಗಲ್ ಡಿಟಿಜ್ ಬರುತ್ತೆ ಬಂದಂತಹ  ಸಂದರ್ಭದಲ್ಲಿ ಸೋತು ಹೋಗ್ತಾರೆ. ಹೀಗಾಗಿ ಕೇಂದ್ರದಲ್ಲಿ ಬಿಜೆಪಿ ಬರಲ್ಲ, ಪಕ್ಷಾಂತರ ಮಾಡುತ್ತಾರೆ. 350 ವಿಪಕ್ಷದ ಶಾಸಕರನ್ನು ಲೋಕಸಭಾ ಸದಸ್ಯರನ್ನು ಬಿಜೆಪಿಯವರು ಪಕ್ಷಾಂತರ ಮಾಡುತ್ತಿದ್ದರು ಅದೇ ಅವರಿಗೆ ತಿರುಗುಭಾಣ ಆಗುತ್ತೆ ಎಂದು ಹೇಳಿದರು. 

ರಾಜ್ಯದಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಬರುತ್ತೆ ಎಂಬ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಗೆ ಸಿಂಗಲ್ ಡಿಜಿಟ್ ಬರುತ್ತೆ, 10ಸ್ಥಾನಕ್ಕೂ ಬರಲ್ಲ ಎಂದರು.

ಚುನಾವಣೆ ಬಳಿಕ ಸಚಿವ ಸಂಪುಟ ಪುನರ್ ರಚನೆ ಮಾಡಿ ಹಿರಿಯರನ್ನು ಕೈ ಬಿಡುತ್ತಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಅದೆಲ್ಲ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.  

ನರೇಂದ್ರ ಮೋದಿ ಹೇಳಿಕೆ ವಿಚಾರಕ್ಕೆವಾಗಿ ಮಾತನಾಡಿದ ಅವರು, ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದಿರುವ ಪಕ್ಷ. ಸ್ವಾತಂತ್ರ್ಯ ಬಂದಾಗ ಬಿಜೆಪಿ ಇರಲಿಲ್ಲ , ಆರ್ ಎಸ್ ಸೇರಿ ಇವರ್ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಅವರಿಂದ ನಾವೇನೂ ಕಲಿಯೋದು ಬೇಕಿಲ್ಲ. ನರೇಂದ್ರ ಮೋದಿ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. ನರೇಂದ್ರ ಮೋದಿ ಒಬ್ಬರೆ 130ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಮೋದಿ ಹರಿಶ್ಚಂದ್ರನ ಹಾಗೆ ಮಾತಾಡುತ್ತಾರೆ. ದೇಶದಲ್ಲಿ ಇರುವ ಭ್ರಷ್ಟಾಚಾರಿಗಳನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ದೇಶದ ಭ್ರಷ್ಟಾಚಾರಿಗಳಿಗೆ ಕ್ಲೀನ್ ಚೀಟ್ ಕೊಟ್ಟಿದ್ದಾರೆ. ಎಲ್ಲ ಕೆಟ್ಟ ಜನರೆಲ್ಲರೂ ಬಿಜೆಪಿ ಪಕ್ಷದಲ್ಲಿ ಇದ್ದಾರೆ. ನಮ್ಮ ಪಕ್ಷ ಶುದ್ಧೀಕರಣವಾಗಿದೆ ಎಂದು ಹೇಳಿದರು. 

ಫಲಿತಾಂಶದ ಬಳಿಕ  ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು,  ಅದೆಲ್ಲ ಹೈಕಮಾಂಡ್ ಗೆ ಬಿಟ್ಟಿದ್ದು ಆ ತರಹದ್ದು ಅವಕಾಶ ಇಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಎಲ್ಲಿಯವರೆಗೆ ಮುಂದುವರೆಯುತ್ತಾರೆ ಅನೋದು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು.‌

ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು,ನಮ್ಮ ಸರ್ಕಾರಕ್ಕೂ ನಮ್ಮ ಪಕ್ಷಕ್ಕೂ ಹಾಗೂ ಪೆನ್ ಡ್ರೈವ್ ಗೂ ಯಾವ ಸಂಬಂಧವೂ ಇಲ್ಲ. ಪ್ರಜ್ವಲ್ ರೇವಣ್ಣ ಕರೆತುರವ ಬಗ್ಗೆ ಗೃಹ ಮಂತ್ರಿ ನೋಡಿಕೊಳ್ಳುತ್ತಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button