Film & EntertainmentKarnataka NewsLatest

*ತಿಥಿ ಸಿನಿಮಾದ ಸೆಂಚುರಿಗೌಡ ನಿಧನ*

ಪ್ರಗತಿವಾಹಿನಿ ಸುದ್ದಿ: ತಿಥಿ ಸಿನಿಮಾದ ಸೆಂಚುರಿಗೌಡ ಪಾತ್ರದ ಮೂಲಕ ರಾಜ್ಯಾದ್ಯಂತ ಹೆಸರು ಮಾಡಿದ್ದ ಕಲಾವಿದ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಿಂಗ್ರಿಗೌಡ ನಿಧನರಾಗಿದ್ದಾರೆ.

ಅವರಿಗೆ ನೂರು ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು. ಅವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇಂದು ಅವರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪಾಂಡವಪುರ ತಾಲೂಕಿನ ಸಿಂಗ್ರೆಗೌಡನ ಕೊಪ್ಪಲು ಗ್ರಾಮದವರಾದ ಸಿಂಗ್ರೆಗೌಡ ಅವರು ತಿಥಿ ಸಿನಿಮಾದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ತಿಥಿ ಸಿನಿಮಾದಲ್ಲಿ ಅವರ ಪಾತ್ರವಾದ ಸೆಂಚುರಿಗೌಡ ಎಂಬ ಹೆಸರಿನಿಂದಲೇ ಅವರನ್ನು ಜನರು ಗುರುತಿಸುತ್ತಿದ್ದರು.

ತಿಥಿ ಸಿನಿಮಾ ಖ್ಯಾತಿ ಗಡ್ಡಪ್ಪ ಪಾತ್ರಧಾರಿ ಚನ್ನೇಗೌಡ ಅವರು 2025ರ ನವೆಂಬರ್ 12ರಂದು ನಿಧನ ಹೊಂದಿದ್ದರು. ಈ ಸಿನಿಮಾದಲ್ಲಿ ಸೆಂಚುರಿ ಗೌಡ ಪಾತ್ರ ಮಾಡಿದ್ದ ಸಿಂಗ್ರಿಗೌಡ ಕೂಡ ಈಗ ನಿಧನರಾಗಿದ್ದಾರೆ. 

Home add -Advt

Related Articles

Back to top button