*ದಿ.ಇನ್ಸ್ಟಿಟ್ಯೂಷನ್ ಆಫ್ ಇಂಜಿನೀಯರ್ಸ್ ಸ್ಥಾನಿಕ ಸಂಸ್ಥೆಯಲ್ಲಿ ಸರ್ ಎಂ.ವ್ಹಿ ಅವರ ಜನ್ಮ ದಿನ ಆಚರಣೆ*

ಪ್ರಗತಿವಾಹಿನಿ ಸುದ್ದಿ: ದಿ. ಇನ್ಸ್ಟಿಟ್ಯೂಷನ್ ಆಫ್ ಇಂಜಿನೀಯರ್ಸ್ ಸ್ಥಾನಿಕ ಸಂಸ್ಥೆ, ಬೆಳಗಾವಿಯಲ್ಲಿ ಸರ್ ಎಂ.ವ್ಹಿ.ಅವರ 165 ನೇಯ ಜನ್ಮ ದಿನಾಚರಣೆಯ ಅಂಗವಾಗಿ 58 ನೇಯ “ಇಂಜಿನೀಯರುಗಳ ದಿನ”ವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜೇಂದ್ರ ಬೆಳಗಾಂಕರ, ಚೇರಮನ್ ಕೆ.ಎಲ್.ಎಸ್, ಜಿ.ಐ.ಟಿ. ಇವರು, ಭಾರತವು ಮೂರನೆಯ ಆರ್ಥಿಕ ಬಲಿಷ್ಠ ರಾಷ್ಟ್ರವಾಗುವಲ್ಲಿ ಸಾಗುತ್ತಿರುವ ಕುರಿತು ಮಾತನಾಡಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸದ್ದ ಧಾರವಾಡ ಐ.ಐ.ಟಿ.ಯ ಪ್ರಾಧ್ಯಾಪಕರಾದ ಡಾ.ಆರ್.ಪ್ರಭು ಇವರು ನಿಗದಿತ ವಿಷಯ “ಡೀಪ್ ಟೆಕ್ ಮತ್ತು ಇಂಜಿನೀಯರಿಂಗ್ ಎಕ್ಸಲೆನ್ಸ್-ಡ್ರೈವಿಂಗ್ ಇಂಡಿಯಾಸ್ ಟೆಕೆಡ್” ವಿಷಯದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ವಿಶೇಷ ಸಾಧನಗೈದ ಇಂಜಿನೀಯರುಗಳಾದ ಡಾ.ರಘುರಾಜ ಕೆ.ರಾವ್, ಎಂ.ಡಿ. ಅಕ್ಸಾಟೆಕ್ ಹಾಗೂ ಸಂಜೀವಕುಮಾರ ಹುಲಕಾಯಿ ಅಧೀಕ್ಷಕ ಅಭಿಯಂತರರು ಲೋಕೋಪಯೋಗಿ ಇಲಾಖೆ, ಬೆಳಗಾವಿ ಇವರನ್ನು ಸನ್ಮಾನಿಸಲಾಯಿತು.
ನಿವೃತ್ತ ಮು.ಇಂ.ಶ್ರೀ.ಎಸ್.ಎಸ್. ಖಣಗಾವಿ ಇವರು ಅಧ್ಯಕ್ಷತೆ ವಹಿಸಿದ್ದರು.
ಡಾ. ಬಿ. ವೆಂಕಟೇಶ ಗೌರವ ಕಾರ್ಯದರ್ಶಿಗಳು ಸ್ವಾಗತಿಸಿದರು. ಬಿ.ಜಿ.ಧರೆಣ್ಣಿ, ಸಿ.ಬಿ.ಹಿರೇಮಠ ಅತಿಥಿ ಪರಿಚಯ ಮಾಡಿದರು. ಪೂರ್ಣಿಮಾ ಚರಂತಿಮಠ ಸರ್. ಎಂ.ವ್ಹಿ. ಬಗೆಗೆ ಮಾತನಾಡಿದರು. ಪ್ರೋ. ಮಂಜುನಾಥ ವಂಧನಾರ್ಪಣೆ ಸಲ್ಲಿಸದರು. ವಿಲಾಸ ಬದಾಮಿ, ಎಚ್.ಸುರೇಶ, ಎಸ್.ಎಸ್.ಸಬರದ, ಎಸ್.ಎಮ್.ಮೇಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.




