*ಎಸ್ಐಆರ್ ಅಂತಿಮ ಮತದಾರರ ಪಟ್ಟಿ ಪ್ರಕಟ*: *ಡಿಲಿಟ್ ಆಗಿರುವ ಮತದಾರರು ಎಷ್ಟು?* *ಆಯುಕ್ತರು ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR)ya ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಥಿ ನಡೆಸಿದ ಅನ್ಬುಕುಮಾರ್, ಆಗಸ್ಟ್ 24 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಿತ್ತು. ಈಗ ಅಂತಿಮ ಪಟ್ಟಿ ಹೊರಬಿದ್ದಿದ್ದು, 4,54,55,689 ಮತದಾರರು ಇದ್ದಾರೆ. ಮಹಿಳೆಯರು- 2,29,15,196 ಹಾಗೂ ಪುರುಷರು 2,25,40,493 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ಎಸ್ಐಆರ್ ಬಳಿಕ ರಾಜ್ಯದ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 4.55 ಕೋಟಿ ಅರ್ಹ ಮತದಾರರು ಇದ್ದಾರೆ. ಆ ಮೂಲಕ ರಾಜ್ಯದಲ್ಲಿ ಎಸ್ಐಅರ್ ಬಳಿಕ 99.32 ಲಕ್ಷ ಮತದಾರರನ್ನು ಅಂತಿಮ ಪಟ್ಟಿಯಿಂದ ಕೈ ಬಿಡಲಾಗಿದೆ.
ರಾಜ್ಯದಲ್ಲಿ ಎಸ್ಐಆರ್ ಮುಂಚೆ 5.54 ಕೋಟಿ ಮತದಾರರು ಇದ್ದರು. ಅದೇ ಎಸ್ಐಆರ್ನ ಕರಡು ಮತದಾರರ ಪಟ್ಟಿಯಲ್ಲಿ ಮತದಾರರ ಸಂಖ್ಯೆ 4.46 ಕೋಟಿಗೆ ಇಳಿಕೆಯಾಗಿತ್ತು. ಇದೀಗ ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ರಾಜ್ಯದಲ್ಲಿ 4.55 ಕೋಟಿ ಮತದಾರರು ಇರಲಿದ್ದಾರೆ.
ಆ ಮೂಲಕ ಎಸ್ಐಆರ್ ಮುಂಚೆ ಇದ್ದ ಮತದಾರರ ಸಂಖ್ಯೆಯಿಂದ ಸುಮಾರು 99.32 ಲಕ್ಷ ಮತದಾರರ ಕಡಿತವಾಗಿದೆ. ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಅಂತಿಮ ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ತನ್ನ ವೆಬ್ಸೈಟ್ https://ceo.karnataka.gov.in/enನಲ್ಲಿ ಪ್ರಕಟಿಸಿದೆ.
ಅಂತಿಮ ಮತದಾರರ ಪಟ್ಟಿಯಂತೆ ರಾಜ್ಯದಲ್ಲಿ ಮಹಿಳಾ ಮತದಾರರೇ ಅಧಿಕವಾಗಿದ್ದಾರೆ. ರಾಜ್ಯದಲ್ಲಿ ಮಹಿಳಾ ಮತದಾರರು 2,29,12,355 ಮತದಾರರು ಇದ್ದರೆ, 2,25,40,493 ಪುರುಷ ಮತದಾರರು ಇದ್ದಾರೆ. 2,841 ಇತರೆ ಮತದಾರರು ಇದ್ದಾರೆ. ಸಾಗರೋತ್ತರ ಮತದಾರರ ಸಂಖ್ಯೆ 3,252 ಇದ್ದರೆ, 18-19 ವಯೋಮಾನದ 6,83,364 ಮತದಾರರು ಇದ್ದಾರೆ. ಇನ್ನು 85+ ವಯೋಮಾನದ 3,92,134 ಮತದಾರರು ಇದ್ದಾರೆ.
ಎಸ್ಐಆರ್ಗೂ ಮುನ್ನ ಬೆಂಗಳೂರಲ್ಲಿ 1.3 ಕೋಟಿ ಮತದಾರರು ಇದ್ದರು. ಆದರೆ, SIR ಮುಗಿದ ಬಳಿಕ 59,08,151 ಮತದಾರರು ಇದ್ದಾರೆ. ಡಿಲೀಟ್ ಆದ ಮತದಾರರ ಸಂಖ್ಯೆ 48,00,565 ಆಗಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




