*ಕಾಲೇಜಿನಲ್ಲಿ ಪ್ರಾಜೆಕ್ಟರ್ ಕಳ್ಳತನ: ಇಬ್ಬರು ಕಾಲೇಜ್ ವಿಧ್ಯಾರ್ಥಿಗಳು ಸೇರಿ ಓರ್ವ ಅಪ್ರಾಪ್ತನ ಬಂಧನ*
ಪ್ರಗತಿವಾಹಿನಿ ಸುದ್ದಿ; ಶಿರಸಿ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಗಲಲ್ಲೇ ಕಳ್ಳರು ಕಾಲೇಜ್ ರೂಂಗೆ ಅಳವಡಿಸಿದ್ದ ಪ್ರೊಜೆಕ್ಟರ್ ಕಳ್ಳತನ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ. ಶೈಕ್ಷಣಿಕ ಜಿಲ್ಲೆ ಎಂದೇ ಕರೆಯಲ್ಪಡುವ ಶಿರಸಿಯ ಕಾಲೇಜಿನಲ್ಲಿ ಈ ಘಟನೆ ಸಂಭವಿಸಿದೆ.
ಶಿರಸಿ-ಬನವಾಸಿ ಮಾರ್ಗದ ಟಿಪ್ಪು ನಗರದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 38- 39 ನೇ ರೂಮಿನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಕಾಲೇಜಿನ ರೂಂನಲ್ಲಿ ಅಳವಡಿಸಲಾಗಿದ್ದ ಪ್ರೊಜೆಕ್ಟರ್, ಎರಡು ಎಂಡ್ರಾಯ್ಡ್ ಬೊಕ್ ಮತ್ತು ನಾಲ್ಕು ಸ್ಪೀಕರ್ ಕಳ್ಳತನ ಮಾಡಿದ್ದಾರೆ. ಸಿ.ಸಿ ಕ್ಯಾಮರಕ್ಕೆ ಚ್ವಿಂಗಮ್ ಹಚ್ಚಿ ಕ್ಯಾಮರಾ ಹೈಡ್ ಮಾಡಿ ಕಳ್ಳತನ ಮಾಡಿದ್ದು,ವಿದ್ಯಾರ್ಥಿಗಳಿಂದಲೇ ಈ ಕೃತ್ಯ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಬಳಿಕ 74,000 ರೂ. ಬೆಲೆಬಾಳುವ ಎರಡು ಪ್ರಾಜೆಕ್ಟರ್, ಎರಡು ಆಂಡ್ರಾಯ್ಡ ಬಾಕ್ಸ್ ಹಾಗೂ ನಾಲ್ಕು ಸ್ಪೀಕರ್ ಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಕಾಲೇಜಿನ ಪ್ರಾಂಶುವಾಲರಾದ ಡಾ. ದ್ರಾಕ್ಷಾಯಿಣಿ ಹೆಗಡೆ ಅವರು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದರು.
ಅದರಂತೆ ಆರೋಪಿತರಾದ ವಿನಯ್ ಗೌಳಿಶಾಂತಿನಗರ ಸಿರ್ಸಿ, ಪವನ್ ಕುಮಾರ್ ಗಣೇಶನಗರ ಸಿರ್ಸಿ,ಹಾಗೂ ಒಬ್ಬ ಅಪ್ರಾಪ್ತ ಬಾಲಕ ಸೇರಿದಂತೆ ಮೂರನ್ನು ಪೊಲೀಸರು ಬಂಧಿಸಿ ಕಳ್ಳತನವಾದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿತರಲ್ಲಿ ಇಬ್ಬರು ಅದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
ಡಿಎಸ್ಪಿ ಗಣೇಶ್ ಕೆಎಲ್ , ಸಿಪಿಐ ರಾಮಚಂದ್ರ ನಾಯಕ್ ಮಾರ್ಗದರ್ಶನದಲ್ಲಿ ಪಿಎಸ್ಐ ದಯಾನಂದ ಜೋಗಳೆಕರ್ , ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ