
ಪ್ರಗತಿವಾಹಿನಿ ಸುದ್ದಿ, ಶಿರಸಿ – ಶಿರಸಿ ನಗರದ ಮಧ್ಯಭಾಗದಲ್ಲಿ ದೇವಿಕೆರೆ ಇದೆ. ಹಲವು ವರ್ಷಗಳ ಹಿಂದೆ ಶಿರಸಿಯ ನಗರಸಭೆ ದೇವಿಕೆರೆಯ ಹೂಳನ್ನು ತೆಗೆದು ದೇವಿಕೆರೆಯಲ್ಲಿ ಹೆಚ್ಚಿನ ನೀರು ನಿಲ್ಲುವಂತೆ ಮಾಡಲಾಗಿತ್ತು. ಆನಂತರ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಅಭಿವೃದ್ಧಿ ಕಾರ್ಯ ಈಗ ಅಂತಿಮ ಹಂತ ತಲುಪುತ್ತಿದೆ.

ಅಲ್ಲದೆ ದೇವಿಕೆರೆಯಿಂದ ಮುಂದೆ ಹೋಗುವ ಸಾರ್ವಜನಿಕರು ತಪ್ಪದೇ ನಿಂತು ಕೈಮುಗಿದು ಮುಂದಿನ ಕೆಲಸ ನಿರ್ವಿಘ್ನದಿಂದ ಸಾಗಲಿ ಎಂಬ ಭಾವನೆಯಿಂದ ನಮಸ್ಕರಿಸಿ ಹೋಗುವುದು ಸಾಮಾನ್ಯವಾಗಿದೆ.

ಶಿರಸಿಯ ದೇವಿಕೆರೆ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಕೆಲವರ ಮಾಹಿತಿಯಂತೆ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಮೂರ್ತಿ ದೇವಿಕೆರೆಯಲ್ಲಿ ನಾಡಿಗ್ ಕುಟುಂಬದವರಿಗೆ ದೊರೆತಿದ್ದು ಎಂಬ ಮಾತು ಇದೆ. ಈ ಕಾರಣದಿಂದಲೇ ಕೆರೆಗೆ ದೇವಿಕೆರೆ ಎಂಬ ಹೆಸರು ಬಂದಿದೆ.
