
ಪ್ರಗತಿವಾಹಿನಿ ಸುದ್ದಿ, ಶಿರಸಿ – ಇಲ್ಲಿಯ ಪ್ರಸಿದ್ಧ ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಜಾತ್ರೆಯ ನಂತರದಲ್ಲಿ ಸಂಪ್ರದಾಯದಂತೆ ದೇವಿಯ ಮೂರ್ತಿಯ ಪುನಃ ಪ್ರತಿಷ್ಠಾ ಕಾರ್ಯ ಬುಧವಾರ, ಯುಗಾದಿಯ ದಿನ ನೆರವೇರಿತು.

ವಿವಾಹ ಮಂಗಲೋತ್ಸವ ನಡೆದು ಸರ್ವಮಂಗಳೆಯಾಗಿ ದೇವಿಯು ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಂಡು ನಂತರ ಜಾತ್ರೆ ಮುಕ್ತಾಯದ ನಂತರ ಅಮಂಗಳವಾಗಿ ಮರಳುತ್ತಾಳೆನ್ನುವ ನಂಬಿಕೆ ಇದೆ. ನಂತರದ 15 ದಿನಗಳ ಕಾಲ ದೇವಿಯ ದರ್ಶನ ಇರುವುದಿಲ್ಲ.
ಯುಗಾದಿಯ ಸಂದರ್ಭದಲ್ಲಿ ದೇವಾಲಯದಲ್ಲಿ ಶ್ರೀ ಮಾರಿಕಾಂಬಾ ದೇವಿಯ ಪುನಃ ಪ್ರತಿಷ್ಠಾ ಕಾರ್ಯ ನೆರವೇರಿಸಲಾಗಿದೆ.
ಇನ್ನು ಮುಂದೆ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶವಿರುತ್ತದೆ. ಆದರೆ ಈ ವರ್ಷ ಕೋರೋನಾ ಹಿನ್ನೆಲೆಯಲ್ಲಿ ಸಧ್ಯಕ್ಕೆ ಭಕ್ತರಿಗೆ ದೇವಸ್ಥಾನ ಪ್ರವೇಶ ಇರುವುದಿಲ್ಲ.