Latest

ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ 7,70000 ರೂಪಾಯಿ ವಂಚನೆ; ಖತರ್ನಾಕ್ ಆರೋಪಿ ಬಂಧನ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಸಾರ್ವಜನಿಕರಿಗೆ ಕಸ್ಟಮ್ ಅಧಿಕಾರಿ ಎಂದು ಸುಳ್ಳು ಹೇಳಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿ ವಿಭಾಗದ ಕಸ್ಟಮ್ ಅಧಿಕಾರಿ ಎಂದು ಸುಳ್ಳು ಹೇಳಿ ಶಿರಸಿಯ ಹಿತ್ತಲಗದ್ದೆ ಆರೆಕೊಪ್ಪದ ಮಂಜುನಾಥ್ ಹೆಗಡೆ ಹಾಗೂ ಸ್ನೇಹಿತರಿಗೆ ವಂಚಿದ ಹಿನ್ನೆಲೆಯಲ್ಲಿ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮಂಜುನಾಥ್ ಹೆಗಡೆ ಹಾಗೂ ಅವರ ಸ್ನೇಹಿತರಿಗೆ ಆರೋಪಿ ಮನೋಜ್ ನರಸಿಂಹ ಪೂಜಾರಿ ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು 7,70000 /-ರೂಪಾಯಿ ಹಣವನ್ನು ಪಡೆದು ವಂಚಿಸಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಮನೋಜ್ ಪೂಜಾರಿ ಕುಂದಾಪುರ ಮೂಲದವನಾಗಿದ್ದಾನೆ.

ಉತ್ತರ ಕನ್ನಡ ಜಿಲ್ಲೆ ಪೊಲೀಸ್ ಅಧೀಕ್ಷಕರಾದ ಸುಮನ್. ಡಿ ಪೆನ್ನೇಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರವಿ.ಡಿ.ನಾಯ್ಕ್, ಪೊಲೀಸ್ ಉಪಾದೀಕ್ಷಕರ ಮಾರ್ಗದರ್ಶನದಲ್ಲಿ ಶ್ರೀರಾಮಚಂದ್ರ ನಾಯಕ ಸಿಪಿಐ ಶಿರಸಿ ವೃತ್ತ ರವರ ನೇತೃತ್ವದಲ್ಲಿ ಪಿ.ಎಸ್.ಐ ಈರಯ್ಯ. ಡಿ. ಎನ್. ಪ್ರೊ.ಪಿ .ಎಸ್. ಐ ದೇವೇಂದ್ರ ನಾಯ್ಕ್ ಸಿಬ್ಬಂದಿಯವರಾದ ಚೇತನ್.ಎಚ್.ಮಹದೇವ ನಾಯಕ.ಗಣಪತಿ ನಾಯ್ಕ್ .ಕುಬೇರಪ್ಪ.ಪ್ರದೀಪ್. ರೇವಣಕರ್. ಶ್ರೀಧರ. ಅರುಣ .ಲಕ್ಷ್ಮಪ್ಪ .ಚೇತನ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸವದತ್ತಿ ಕ್ಷೇತ್ರದಿಂದ ಸ್ಥಳೀಯರಿಗೆ ಆದ್ಯತೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button