Karnataka News

*ಶಿರಸಿ, ಕುಮಟಾ ಸೇರಿದಂತೆ ಉತ್ತರ ಕನ್ನಡದ ಹಲವೆಡೆ ಭೂಕಂಪನ*

ಪ್ರಗತಿವಾಹಿನಿ ಸುದ್ದಿ: ಒಂದೆಡೆ ತಮಿಳುನಾಡು, ಪುದುಚೆರಿಯಲ್ಲಿ ಫೆಂಗಾಲ್ ಚಂಡಮಾರುತದ ಅಬ್ಬರದಿಂದಾಗಿ ಬಿರುಗಾಳಿ ಸಹಿತ ಭಾರಿ ಮಳೆ, ಭೂಕುಸಿತ ಸಂಭವಿಸುತ್ತಿದ್ದರೆ ಇನ್ನೊಂದೆಡೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕಂಪನದ ಅನುಭವವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಘಟ್ಟ ಪ್ರದೇಶದ ಭಾಗದಲ್ಲಿ ಭೂಕಂಪವುಂತಾಗಿದ್ದು, ಆತಂಕಗೊಂಡ ಜನರು ಭಯಭೀತರಾಗಿ ಮನೆಗಳಿಂದ ಹೊರಗೋಡಿಬಂದಿದಾರೆ.

ಜಿಲ್ಲೆಯ ಶಿರಸಿ, ಕುಮಟಾ ಭಾಗದಲ್ಲಿ ಭೂಮಿ ಕಂಪಿಸಿದೆ. ಕುಮಟಾದ ದೇವಿಮನೆ ಘಟ್ಟ, ಶಿರಸಿ ತಾಲೂಕಿನ ರಾಗಿಹೊಸಹಳ್ಳಿ, ಕಸಗೆ, ಬಂಡಳ ಭಾಗದಲ್ಲಿ ಭೂಕಂಪನವಾಗಿದೆ ಎಂದು ತಿಳಿದುಬಂದಿದೆ.

Home add -Advt

Related Articles

Back to top button