Kannada NewsKarnataka NewsLatest
*ಬಾವಿಗೆ ಬಿದ್ದ ತಮ್ಮನನ್ನು ರಕ್ಷಿಸಿದ 8 ವರ್ಷದ ಅಕ್ಕ*

ಪ್ರಗತಿವಾಹಿನಿ ಸುದ್ದಿ; ತುಮಕೂರು: ಆಟವಾಡುತ್ತ ಬಾವಿಗೆ ಬಿದ್ದಿದ್ದ ತಮ್ಮನನ್ನು 8 ವರ್ಷದ ಅಕ್ಕ ರಕ್ಷಿಸಿರುವ ರೋಚಕ ಘಟನೆ ತುಮಕೂರಿನ ಕುಚ್ಚಂಗಿಯಲ್ಲಿ ನಡೆದಿದೆ.
ಆಟವಾಡುತ್ತ ಬಾವಿಗೆ ಬಿದ್ದಿದ್ದ ತಮ್ಮ ಹಿಮಾಂಶುವನ್ನು ಅಕ್ಕ ಶಾಲೂ ಜೀವದ ಹಂಗು ತೊರೆದು ರಕ್ಷಿಸಿದ್ದಾಳೆ. ಉತ್ತರ ಪ್ರದೇಶ ಮೂಲದ ದಂಪತಿ ಕುಚ್ಚಂಗಿ ತೋಟದ ಮನೆಯಲ್ಲಿ ಕೆಲಸಕ್ಕೆ ಇದ್ದರು. ದಂಪತಿಗೆ ನಾಲ್ವರು ಮಕ್ಕಳು. 8 ವರ್ಷದ ಶಾಲೂ, 7 ವರ್ಷದ ಹಿಮಾಂಶು, 3 ವರ್ಷದ ರಾಶಿ ಹಾಗೂ 2 ವರ್ಷದ ಕಪಿಲ್.
ಹಿಮಾಂಶು ಹಾಗೂ ಕಪಿಲ್ ತೋಟದಲ್ಲಿ ಆಟವಾಡುತ್ತಾ ಇದ್ದಾಗ ಬಾವಿಗೆ ಚಂದು ಬಿದ್ದಿದೆ. ಬಾವಿಯಲ್ಲಿ ಬಿದ್ದಿದ್ದ ಚಂಡು ತೆಗೆಯಲು ಹೋಗಿ ನೀರಿನಲ್ಲಿ ಮೂಳುಗುವ ಹಂತಕ್ಕೆ ತಲುಪಿದ್ದಾನೆ. ಇದನ್ನು ಕಂಡ ಶಾಲೂ ಲೈಫ್ ಜಾಕೆಟ್ ಧರಿಸಿ ಬಾವಿಗೆ ಜಿಗಿದು ತಮ್ಮನನ್ನು ರಕ್ಷಿಸಿದ್ದಾಳೆ. ಈ ವೇಳೆ ಆಕೆ ಸಹಾಯಕ್ಕೆ ಬಂದ ಅಕ್ಕ-ಪಕ್ಕದ ಜನರು ಇಬ್ಬರು ಮಕ್ಕಳನ್ನು ಬಾವಿಯಿಂದ ಮೇಲಕೆತ್ತಿದ್ದಾರೆ.




