Kannada NewsKarnataka NewsLatest

*ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರು ಹೇಳಿ ಮಹಿಳೆಯಿಂದ ವಂಚನೆ; ಆರೋಪಿ ಬಂಧನ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಟ, ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಲ್ಲಿ ಮಹಿಳೆಯೊಬ್ಬರು ಮೋಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಈಗಾಗಲೇ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ನಮ್ಮಮ್ಮ ಸೂಪರ್ ಸ್ಟಾರ್, ಮಕ್ಕಳ ಡ್ಯಾನ್ಸ್ ಪ್ರೋಗ್ರಾಮ್, ಹಲವು ರಿಯಾಲಿಟಿ ಶೋ ಸೇರಿದಂತೆ ಚಿಕ್ಕ ವಯಸ್ಸಿನಲ್ಲಿಯೇ ಜನಪ್ರಿಯತೆ ಪಡೆದುಕೊಂಡಿದ್ದು, ಇದೀಗ ವಂಶಿಕಾ ಹೆಸರು ಹೇಳಿಕೊಂಡು ನಿಶಾ ಎಂಬ ಮಹಿಳೆ ಹಲವು ಮಕ್ಕಳ ಪೋಷಕರಿಗೆ ವಂಚಿಸಿದ್ದಾರೆ.

Home add -Advt

ವಂಶಿಕಾ ಹೆಸರು ಹೇಳಿಕೊಂಡು ಮಹಿಳೆ ನಿಶಾ ಎಂಬುವವರು ಹಲವು ಮಕ್ಕಳ ಪೋಷಕರಿಗೆ ರಿಯಾಲಿಟಿ ಶೋಗಳ ಟ್ರ‍ೇನಿಂಗ್, ಮಕ್ಕಳ ಗ್ರೂಮಿಂಗ್ ತರಗತಿ, ಇವೆಂಟ್ ಮ್ಯಾನೇಜ್ ಮೆಂಟ್, ಮಕ್ಕಳ ಟ್ಯಾಲೆಂಟ್ ಶೋ ನಡೆಸುತ್ತೇನೆ ಎಂದು ಹೇಳಿಕೊಂಡು ಪೋಷಕರಿಂದ ಹಣ ಪಡೆದು ಮೋಸ ಮಾಡಿದ್ದಾಳೆ ಎನ್ನಲಾಗಿದೆ. 40 ಲಕ್ಷಕ್ಕೂ ಅಧಿಕ ಹಣ ಪಡೆದಿರುವ ನಿಶಾ ಯಾವುದೇ ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ ಎಂದು ತಿಳಿದುಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ವಂಶಿಕಾ ತಾಯಿ, ಮಾಸ್ಟರ್ ಆನಂದ್ ಪತ್ನಿ ಯಶಸ್ವಿ ಹಾಗೂ ಹಣ ಕಳೆದುಕೊಂದ ಪೋಷಕರು ಸದಾಶಿವನಗರ ಠಾಣೆಯಲ್ಲಿ ನಿಶಾ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Related Articles

Back to top button