
ಪ್ರಗತಿವಾಹಿನಿ ಸುದ್ದಿ: ತಂದೆ-ತಾಯಿ ಬೈದರು ಎಂಬ ಕಾರಣಕ್ಕೆ ಮನನೊಂದು ಮನೆ ಬಿಟ್ಟು ಹೋಗಿದ್ದ ಅಕ್ಕ-ತಂಗಿ ಇಬ್ಬರೂ ಮಹಾರಾಷ್ಟ್ರದ ಪುಣೆಯಲ್ಲಿ ಪತ್ತೆಯಾಗಿದ್ದಾರೆ.
ಹಾವೇರಿ ಮೂಲದ ಅಕ್ಕ-ತಂಗಿ ಉಮರ್ ಖೈರ್ ಫಾತಿಮಾ ಹಾಗೂ ಉಮ್ಮಿ ಹಬಿಬಾ ಪುಣೆಯಲ್ಲಿ ಪತ್ತೆಯಾಗಿದ್ದಾರೆ. ಹಾವೇರಿಯ ಅಬ್ದುಲ್ ಖಾದರ್ ಲೋಹಾರ್ ಅವರ ಪುತ್ರಿಯರಾದ ಇಬ್ಬರೂ ಹಾವೇರಿಯ ಲಯನ್ಸ್ ಆಂಗ್ಲ ಶಾಲೆಯಲ್ಲಿ ಓದುತ್ತಿದ್ದರು. ಶನಿವಾರ ಶಾಲೆಗೆ ಹೋದವರು ಶಾಲೆ ಮುಗಿದ ಬಳಿಕ ಮನೆಗೆ ಬಂದಿಲ್ಲ. ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ.
ಆತಂಕಗೊಂಡ ಪೋಷಕರು ಹಾವೇರಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು. ಹುಡುಕಾಟ ನಡೆಸಿದ ಪೊಲೀಸರಿಗೆ ಅಕ್ಕ-ತಂಗಿ ಪುಣೆಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.