ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕೋವಿನ್ ವೆಬ್ ಸೈಟ್ನಲ್ಲಿ ಇನ್ನು ಮುಂದೆ ಒಂದೇ ಮೊಬೈಲ್ ನಂಬರ್ ಮೂಲಕ ಆರು ಜನರ ನೋಂದಣಿಗೆ ಅವಕಾಶ ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಈ ಹೊಸ ಆದೇಶ ಹೊರಡಿಸಿದೆ.
ಭಾರತ ಸರಕಾರದ ಆರೋಗ್ಯ ಸಚಿವಾಲಯದ ಒಡೆತನದಲ್ಲಿರುವ ಕೊ ವಿನ್ ವೆಬ್ ಸೈಟ್ ಕೋವಿಡ್ ಲಸಿಕೆ ಪಡೆಯಲು ಹೆಸರು ನೋಂದಣಿ ಮತ್ತಿತರ ದಾಖಲೆಗಳ ಸಂಗ್ರಹಕ್ಕಾಗಿ ಸಿದ್ಧಪಡಿಸಲಾಗಿದೆ. ಈ ವೆಬ್ಸೈಟ್ನಲ್ಲಿ ನೋಂದಣಿ ಮಾಡುವ ಮೂಲಕ ಹತ್ತಿರದ ಕೋವಿಡ್ ವ್ಯಾಕ್ಸಿನೇಶನ್ ಸೆಂಟರ್, ವ್ಯಾಕ್ಸಿನೇಶನ್ ನೀಡುವ ದಿನಾಂಕ ಮೊದಲಾದ ಮಾಹಿತಿಗಳನ್ನು ಪಡೆಯಬಹುದು. ಅಲ್ಲದೇ ಕೋವಿಡ್ ವ್ಯಾಕ್ಸಿನೇಶನ್ ಸಂದರ್ಭದಲ್ಲಿ ವ್ಯಾಕ್ಸಿನೇಶನ್ ಆದ ಬಗ್ಗೆ ದಾಖಲೆ ನಮೂದಿಸುವಾಗಲೂ ಮೊಬೈಲ್ ನಂಬರ್ ನೀಡಲಾಗುತ್ತದೆ. ಮುಂದೆ ವ್ಯಾಕ್ಸಿನೇಶನ್ ಆದ ದಾಖಲೆಯ ಅಗತ್ಯವಿದ್ದಾಗ ಈ ನೋಂದಾಯಿತ ಮೊಬೈಲ್ ಸಂಖ್ಯೆಯ (ರೆಜಿಸ್ಟರ್ಡ್ ಮೊಬೈಲ್ ನಂಬರ್) ಅಗತ್ಯವಿರುತ್ತದೆ.
ಈ ವರೆಗೆ ಕೊ ವಿನ್ ವೆಬ್ ಸೈಟ್ನಲ್ಲಿ ಒಂದು ಮೊಬೈಲ್ ನಂಬರ್ ನೀಡಿ ಗರಿಷ್ಠ ೪ ಜನರ ಹೆಸರು ನೋಂದಣಿಗೆ ಅವಕಾಶವಿತ್ತು. ಪ್ರಸ್ತುತ ದೇಶದಲ್ಲಿ ವ್ಯಾಕ್ಸಿನೇಶನ್ ಪ್ರಮಾಣ ಹೆಚ್ಚಿರುವುದು, ಅಲ್ಲದೇ ಗ್ರಾಮೀಣ ಭಾಗದ ಬಹಳಷ್ಟು ಜನರಲ್ಲಿ ಮೋಬೈಲ್ ಇಲ್ಲದಿರುವುದು ಮೊದಲಾದ ಕಾರಣಗಳಿಗೆ ವೆಬ್ಸೈಟ್ ಸೌಲಭ್ಯಗಳನ್ನು ಅಪ್ ಡೇಟ್ ಮಾಡಲಾಗಿದೆ. ಪ್ರಸ್ತುತ ಒಂದೇ ಮೊಬೈಲ್ ಸಂಖ್ಯೆಯಲ್ಲಿ ಆರು ಜನರ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಸರಕಾರ ನೀಡಿದ್ದ ಕೋವಿಡ್ ಪರಿಹಾರದ ಚೆಕ್ ಬೌನ್ಸ್ ; ಪ್ರತಿಕ್ರಿಯೆ ನೀಡಿದ CM ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ