Belagavi NewsBelgaum NewsKannada NewsKarnataka NewsLatest

*ಕುಂಭಮೇಳಕ್ಕೆ ಹೋಗಿದ್ದ ಬೆಳಗಾವಿ ಆರು ಯಾತ್ರಿಕರು ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾಕುಂಭಕ್ಕೆ ಹೋಗಿದ್ದ ಬೆಳಗಾವಿ ಜಿಲ್ಲೆಯ ಮತ್ತೆ ಆರು ಜನರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.‌

ಗೋಕಾಕನಿಂದ ಪ್ರಯಾಗರಾಜ‌್‌ನಲ್ಲಿ‌ ನಡೆಯುತ್ತಿರುವ ಮಹಾಕುಂಭದ ಪುಣ್ಯ ಸ್ಥಾನಕ್ಕೆ ಗೋಕಾಕ ತಾಲೂಕಿನ ಹೋಗಿದ್ದ ಆರು ಜನ ಮದ್ಯಪ್ರದೇಶದ ಜಬಲಪುರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.‌ ಗೋಕಾಕನಿಂದ ಮಂಗಳವಾರ ಹೋಗಿದ್ದ ಏಂಟ ಜನರ ಪೈಕಿ ಇಬ್ನರು ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.‌

ಬಾಲಚಂದ್ರ ಗೌಡರ್, ಸುನೀಲ್ ಶೇಡಶಾಳೆ, ಬಸವರಾಜ ಕುರ್ಣಿ, ಬಸವರಾಜ ದೊಡ್ಡಮನಿ, ಈರಣ್ಣ ಶೇಬಿನಕಟ್ಟಿ,‌ ವಿರೂಪಾಕ್ಷ ಗುಮಟ್ಟಿ ಮೃತ ಪಟ್ಟಿದ್ದರೆ.‌ ಮುಸ್ತಾಕ್, ಸದಾಶಿವ ಇಬ್ಬರಿಗ ಗಂಭೀರ ಗಾಯವಾಗಿದೆ. ಇನ್ನು ಮೃತದೇಹಗಳು ರಾಜ್ಯಕ್ಕೆ ವಾಪಸ್ ತರುವ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ.‌

Home add -Advt

Related Articles

Back to top button