EducationKannada NewsKarnataka NewsNational

*ನಿಗೂಢವಾಗಿ ನಾಪತ್ತೆಯಾದ ಆರು ವಿದ್ಯಾರ್ಥಿಗಳು*

ಪ್ರಗತಿವಾಹಿನಿ ಸುದ್ದಿ : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಡೀಮ್ ವರ್ಡ್ ಇಂಟರ್ ನ್ಯಾಷನಲ್ ಶಾಲೆಯ ಹಾಸ್ಟೆಲ್‌ನ 6 ಜನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ನಾಪತ್ತೆಯಾಗಿರುವ ವಿಷಯ ತಿಳಿದ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕಳೆದೆರಡು ದಿನಗಳ ಹಿಂದೆಯೇ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಎಗ್‌ರೈಸ್ ಮಾಡಿ ತಿಂದಿದ್ದರು. ಇದರಿಂದ ಹೆಡ್ ಮಾಸ್ಟರ್ ಸಿಟ್ಟಿಗೆದ್ದು ಬೈದು ವಿದ್ಯಾರ್ಥಿಗಳಿಗೆ ಬಸ್ಕಿ ಹೊಡೆಸಿದ್ದರಂತೆ. ಈ ಕಾರಣಕ್ಕೆ ಅವಮಾನದಿಂದ ವಿದ್ಯಾರ್ಥಿಗಳಾದ ಧನುಷ್, ಮನು, ಶ್ರೇಯಸ್, ಸಿದ್ದೇಶ್‌, ತರುಣ್ ಹಾಗೂ ಯಶಸ್ ನಾಪತ್ತೆಯಾಗಿದ್ದಾರೆಂದು ಪೋಷಕರು ಶಿಕ್ಷಕರ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ.

ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಕಿಡಿಕಾರುತ್ತಿದ್ದು, ಚಿತ್ರದುರ್ಗದ ಡಿವೈಎಸ್‌ಪಿ ದಿನಕ‌ರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಳಲ್ಕೆರೆ ಠಾಣೆ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button