Belagavi NewsBelgaum NewsKannada NewsKarnataka News

*ವಿದ್ಯುತ್ ತಗುಲಿ 13 ದನಗಳ ಸಾವು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾಮಪಂಚಾಯತಿ ವ್ಯಾಪ್ತಿಗೆ ಬರುವ ಹಳೆ ವಂಟಮೂರಿ ಗ್ರಾಮದಲ್ಲಿ ವಿದ್ಯುತ ತಗುಲಿ 13 ದನಗಳು ಮೃತಪಟ್ಟ ಘಟನೆ ನಡೆದಿದೆ. 

ಗ್ರಾಮದ ಮೂವರು ದನಗಳನ್ನು ಮೇಯಿಸಲು ಹೋಗಿದ್ದರು. ಸಂಜೆ ವೇಳೆ ಮಳೆ ಬಂದಾಗ ದನಗಳನ್ನು ಕರೆದುಕೊಂಡು ತಮ್ಮ ತಮ್ಮ ಮನೆಗೆ ಹೋಗುತ್ತಿದ್ದಾಗ ಕರಿಕಟ್ಟಿ ಹಳೆವಂಟಮೂರಿ ಕೂಡುವ ರಸ್ತೆ ಮಧ್ಯದಲ್ಲಿರುವ ವಿದ್ಯುತ ಕಂಬದಿಂದ ವಿದ್ಯುತ್ ನೆಲದಲ್ಲಿ ಹರಿದಾಗ ವಿದ್ಯುತ್ ತಗುಲಿ 13 ದನಗಳು ಸ್ಥಳದಲ್ಲಿ ಮೃತಪಟ್ಟಿವೆ. ಮುತ್ತಪ್ಪಾ ಹುಚ್ಚಯಲ್ಲಪ್ಪಾ ಬಸರಗಿ ಇವರ 4 ಆಕಳು, 2 ಹೋರಿ, ಲಕ್ಷ್ಮಣ ಅಪ್ಪಯ್ಯಾ ಕಿಲಾರಗಿ ಇವರ 1 ಆಕಳು, 1 ಎಮ್ಮೆ ಮತ್ತು ಯಲ್ಲವ್ವಾ ನಿಂಗಪ್ಪ ಮಸ್ತಿ 5 ಆಕಳುಗಳು ಸ್ಥಳದಲ್ಲಿ ಮೃತಪಟ್ಟಿವೆ.

Home add -Advt

ಇನ್ನೂ ಘಟನಾ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ವಿಠಲ ಬುಕನಟ್ಟಿ, ಕಂದಾಯ ನಿರೀಕ್ಷಕ ಸಿ.ಕೆ. ಕಲಕಾಂಬಕರ, ಪಿಎಸ್‌ಐ ಎಸ್.ಕೆ. ಮನ್ನಿಕೇರಿ, ಪಶುವೈಧ್ಯಾಧಿಕಾರಿ ಸಿದ್ದಾರ್ಥ ಮೊಕಾಶಿ, ಸಚಿವ ಸತೀಶ್ ಜಾರಕಿಹೊಳಿಯವರ ಆಪ್ತ ಸಹಾಯಕ ಮಾರುತಿ ಗುಟಗುದ್ದಿ ಭೇಟಿ ನೀಡಿ, ಪರಿಶೀಲಿಸಿದರು.

Related Articles

Back to top button