ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ, ಜೆಕೆಸಿಮೆಂಟ್ಸ್ ಮತ್ತು ಕನ್‌ಸ್ಟ್ರಕ್ಷನ್ ಇಂಡಸ್ಟ್ರಿ ಡೆವಲಪ್ ಮೆಂಟ್ ಕೌನ್ಸಿಲ್ (ಸಿಐಡಿಸಿ), ನವದೆಹಲಿಯ ಸಹಯೋಗದೊಂದಿಗೆ “ಸಿವಿಲ್ ಗುತ್ತಿಗೆದಾರರಿಗೆ ಕೌಶಲ್ಯ ಅಭಿವೃದ್ಧಿ”ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿತ್ತು.
ಕಟ್ಟಡ ನಿರ್ಮಾಣ ಉದ್ಯಮದಲ್ಲಿರುವ ಜನರಿಗೆ, ಸಿಐಡಿಸಿ ಪ್ರಮಾಣೀಕರಣದ ಮಹತ್ವದ ಬಗ್ಗೆ ಅರಿವುಮೂಡಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿತ್ತು.
ಈ ಕಾರ್ಯಾಗಾರಕ್ಕೆ ಜೆಕೆಸಿಮೆಂಟ್ಸ್ ಲಿಮಿಟೆಡ್ ದಕ್ಷಿಣವಲಯದ ಮುಖ್ಯಸ್ಥರಾದ ಸಿದ್ದಾರ್ಥ ಕೋಠಿಯ ಅವರು ಮುಖ್ಯಅತಿಥಿಯಾಗಿದ್ದರು. ಜಿ.ಎನ್.ನಾಗರಾಜನ್ ಮತ್ತು ಆರ್.ಎಂ.ಅಳಗಪ್ಪನ್, ಎಂಜಿನಿಯರ್ ಸಿಐಡಿಸಿ, ಚೆನ್ನೈ ಪ್ರತಿನಿಧಿಯಾಗಿ ಆಗಮಿಸಿದ್ದರು.
ಮುಖ್ಯ ಅತಿಥಿಗಳಾದ ಸಿದ್ದಾರ್ಥ್ ಕೋಠಿಯ ಅವರು ಕಟ್ಟಡ ಕಾರ್ಮಿಕರಿಗೆ ಸಿಐಡಿಸಿ(CIDC) ಪ್ರಮಾಣೀಕರಣದ ಪ್ರಾಮುಖ್ಯತೆ ಮತ್ತು ಜೆಕೆಸಿಮೆಂಟ್ಸ್ ಲಿಮಿಟೆಡ್, ಭಾರತ ಸರಕಾರದ ಈ ಕಾರ್ಯಗತ ಯೋಜನೆಯ ಅನುಷ್ಟಾನದ ಅಂಗವಾಗಿದೆ ಎಂಬುದನ್ನು ವಿವರಿಸಿದರು. ನಾಗರಾಜನ್ ಮತ್ತು ಆರ್.ಎಂ.ಅಳಗಪ್ಪನ್ ಭಾಗವಹಿಸಿದ ಸಿವಿಲ್ ಗುತ್ತಿಗೆದಾರರಿಗೆ ಪ್ರಮಾಣೀಕರಣ ಸಂದರ್ಶನವನ್ನು ನಡೆಸಿದರು. ಪ್ರೊ.ವೈಜನಾಥ ಚೌಗುಲೆ ಮತ್ತು ಪ್ರೊ.ಸೋಮನಾಥ ಖೋತ್ ಅವರು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಉತ್ತಮ ಅಭ್ಯಾಸಗಳು, ಸಿಮೆಂಟ್‌ಗಳ ವಿಧಗಳು ಮತ್ತು ಕಾಂಕ್ರೀಟ್ ಮಿಶ್ರಣಗಳ ಬಗ್ಗೆ ತಾಂತ್ರಿಕ ಉಪನ್ಯಾಸಗಳನ್ನು ನೀಡಿದರು. ಡಾ.ನಿತೇಂದ್ರಪಾಲನಕರ್ ರ್ಮತ್ತು ಡಾ.ವಿಕಾಸ್,ಲ್ಯಾಬ್ಸೆಶನ್ಗಳನ್ನು ನಡೆಸಿದರು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ಡಾ.ವೈಭವ್ ಆರ್.ಚಾಟೆ ಸ್ವಾಗತಿಸಿದರು. ಪ್ರೊ.ವೈಜನಾಥ ಚೌಗುಲೆ ಅತಿಥಿಗಳನ್ನು ಪರಿಚಯಿಸಿದರು. ಸುಮಾರು 120 ಸಿವಿಲ್ ಗುತ್ತಿಗೆದಾರರು, ಮುಖ್ಯಮೇಸ್ತ್ರಿಗಳು, ಬಾರ್ಬೆಂಡಿಂಗ್ ಮೇಸ್ತ್ರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಪ್ರೊ.ಸೋಮನಾಥ ಖೋತ್ ಕಾರ್ಯಕ್ರಮ ನಿರೂಪಿಸಿದರು.
ಡಾ.ನಿತೇಂದ್ರ ಪಾಲನಕರ್ ಅವರ ವಂದನಾರ್ಪಣೆ ಆನಂತರ ರಾಷ್ಟ್ರಗೀತೆಯೊಂದಿಗೆ ಕಾರ್ಯಾಗಾರವು ಕೊನೆಗೊಂಡಿತು. ಕರ್ನಾಟಕ ಲಾ ಸೊಸೈಟಿಯ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರ ಸಂಪೂರ್ಣ ಬೆಂಬಲದೊಂದಿಗೆ ಕಾರ್ಯಾಗಾರ ಯಶಸ್ವಿಯಾಗಿ ನೆರವೇರಿತು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರಿಗೆ ಈಗ ಎಲ್ಲ ಸೌಲಭ್ಯ – ಮೃಣಾಲ ಹೆಬ್ಬಾಳಕರ್
https://pragati.taskdun.com/%e0%b2%b0%e0%b2%be%e0%b2%9c%e0%b3%8d%e0%b2%af/belgaum-rural-people-now-have-all-the-facilities-mrinala-hebbalkar/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ