Election NewsKannada NewsKarnataka NewsNationalPolitics

18 ಶಾಸಕರು ಕಾಂಗ್ರೆಸ್‌ಗೆ ವಾಪಸ್ : ಶಿಕ್ಷಣ ಸಚಿವ ಮಧು ಬಂಗಾರಪ್ಪ

ಪ್ರಗತಿವಾಹಿನಿ ಸುದ್ದಿ: ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಸೇರಿದಂತೆ 18 ಶಾಸಕರು ಕಾಂಗ್ರೆಸ್‌ಗೆ ಬರಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.‌

ಶಿರಸಿಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಹುಟ್ಟುಹಬ್ಬ ಗೌರವ ನಮನ ಸಲ್ಲಿಸಿದ ಬಳಿ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದರು. ಬಿಜೆಪಿಯಲ್ಲಿರುವ 8 ಶಾಸಕರು ಕಾಂಗ್ರೆಸ್‌ಗೆ ಬರಲಿದ್ದಾರೆಂದು ಎಸ್ ಟಿ ಸೋಮಶೇಖರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, 8 ಅಲ್ಲ 18 ಇರಬೇಕು ಸ್ವಲ್ಪ ಇನ್ನೊಮ್ಮೆ ಗಮನಿಸಿ, ಅಲ್ಲಿ ಉಳಿದುಕೊಂಡಿರೋದೆ 18 ಶಾಸಕರು ಮಾತ್ರ. ನಿಮ್ಮ ಜಿಲ್ಲೆಯ ಶಾಸಕ ಶಿವರಾಮ ಹೆಬ್ಬಾರ್ ಸಹ ಬರಲಿದ್ದಾರೆ. ಅವರು ಬರಬೇಕು ಅವರು ಬರೋದಕ್ಕೆ ತುಂಬಾ ವಿಳಂಬ ಮಾಡುತ್ತಿದ್ದಾರೆ. ಬೇಗ ಬರಬೇಕು, ಹೆಬ್ಬಾರ್ ಕಾಂಗ್ರೆಸ್‌ನಿಂದಲೇ ಬಿಜೆಪಿಗೆ ಹೋದವರಲ್ವಾ , ಎಲ್ಲರೂ ವಾಪಸ್ ಬರುತ್ತಾರೆ ಎಂದರು.

Home add -Advt

Related Articles

Back to top button