National

*ಎರಡು ಪ್ರತ್ಯೇಕ ಅಪಘಾತ: 9 ಜನರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ತೆಲಂಗಾಣದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ 9 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಆದಿಲಾಬಾದ್ ಹಾಗೂ ನಲ್ಲಗೊಂಡ ಜಿಲ್ಲೆಗಳಲ್ಲಿ ಈ ಅಪಘಾತಗಳು ಸಂಭವಿಸಿವೆ. ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Home add -Advt

ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದಿಲಾಬಾದ್ ನ ಗುಡಿಹನ್ನೂರು ಮಂಡಲದ ಮೇಕಲಗಂಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.

ಮೃತರನ್ನು ಮೊಯಿಸ್, ಅಲಿ, ಖಾಜಾ ಮೊಯಿನುದ್ದೀನ್, ಮೊಹಮ್ಮದ್ ಉಸ್ಮಾನುದ್ದೀನ್ ಹಾಗೂ ಇನ್ನೋರ್ವ ಎಂದು ಗುರುತಿಸಲಾಗಿದೆ.

ಇನ್ನು ನಲ್ಗೊಂಡ ಬಳಿ ಖರೀದಿಗೆಂದು ಹೋಗುತ್ತಿದ್ದವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತದನ್ನು ಮಲ್ಲಿಕಾಂತಿ ದಿನೇಶ್, ವಲಪುದಾದಾಸು ವಂಶಿ ಹಾಗೂ ಮದ್ಗುಲಪಲ್ಲಿ ಎಂದು ಗುರುತಿಸಲಾದೆ.


Related Articles

Back to top button