LatestPolitics

*14 ನಿವೇಶನ ವಾಪಾಸ್ ನೀಡಿದರೂ ತನಿಖೆ ಮುಂದುವರೆಯಲಿದೆ: ಸಚಿವ ಹೆಚ್.ಕೆ.ಪಾಟೀಲ್*

ಪ್ರಗತಿವಾಹಿನಿ ಸುದ್ದಿ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮುಡಾದಿಂದ ಸಿಕ್ಕಿರುವ 14 ನಿವೇಶನಗಳನ್ನು ವಾಪಾಸ್ ನೀಡುವುದಾಗಿ ತಿಳಿಸಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಓರ್ವ ಗೃಹಿಣೆಗೆ ಅಪಪ್ರಚಾರ, ರಾಜಕೀಯ ದುರುದ್ದೇಶ ಇದೆಲ್ಲದರಿಂದ ಮಾನಸಿಕವಾಗಿ ಆಘಾತಗೊಂಡು ಅವರು ಸೈಟ್ ವಾಪಾಸ್ ನೀಡಲು ನಿರ್ಧರಿಸಿದ್ದಾರೆ. ಸಹೋದರಿ ಪಾರ್ವತಿ ಅವರು ಬರೆದಿರುವ ಪತ್ರದ ಸಾರಾಂಶ ನೋಡಿದರೆ ಅವರು ತೀವ್ರವಾಗಿ ಘಾಸಿಗೊಂಡಿದ್ದಾರೆ ಎಂಬುದು ಸ್ಪಷ್ಟ. ಹೀಗಾಗಿ 14 ನಿವೇಶನ ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ ಎಂದಿದ್ದಾರೆ.

Home add -Advt

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, 14 ನಿವೇಶನ ವಾಪಾಸ್ ನೀಡಿದರೂ ಕೂಡ ತನಿಖೆ ಮುಂದುವರೆಯಲಿದೆ. ಕಾರಣ ಮುಡಾ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕೋರ್ಟ್ ಆದೇಶ ನೀಡಿರುವುದರಿಂದ ಲೋಕಾಯುಕ್ತ ತನಿಖೆ ಮುಂದುವರೆಯಲಿದೆ ಎಂದು ಹೇಳಿದರು.


Related Articles

Back to top button