
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದಲ್ಲಿರುವ ವಂಟಮೂರಿ ಹಾಗೂ ವೈಭವ ನಗರದ ಕೊಳಗೇರಿ ಪ್ರದೇಶಕ್ಕೆ ಶಾಸಕ ಅನಿಲ ಬೆನಕೆ, ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ ಘಾಳಿ ಹಾಗೂ ಕೊಳಗೇರಿ ನಿಗಮದ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಆಲಿಸಿದರು.
ಈ ವೇಳೆ ಅಲ್ಲಿನ ಜನರ ವಿವಿಧ ಸಮಸ್ಯೆಗಳ ಬಗ್ಗೆ ಶಾಸಕರ ಹಾಗೂ ಅಧಿಕಾರಿಗಳ ಗಮನ ಸೆಳೆದರು. ಶಾಸಕರು ಶೀಘ್ರದಲ್ಲೆ ಸಮಸ್ಯೆಗಳ ನಿವಾರಣೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ವೈಭವ ನಗರದಲ್ಲಿ ಕೊಳಗೇರಿ ಜನರಿಗೆ ನಿಗಮದಿಂದ ಮನೆಗಳ ನಿರ್ಮಾಣ ಮಾಡಿಕೊಡುವುದಾಗಿ ಶಾಸಕ ಅನಿಲ ಬೆನಕೆ ಹೇಳಿದರು. ವಂಟಮೂರಿಯ ಪ್ರದೇಶವನ್ನು ಶೀಘ್ರದಲ್ಲೇ ‘ಕೊಳಗೇರಿ ಪ್ರದೇಶ’ ಎಂದು ಘೋಷಿಸಿ ಅಲ್ಲಿಯು ಸಹ ಮನೆಗಳ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು. ಈ ವೇಳೆ ಶಾಸಕರು ಪೌರಕಾರ್ಮಿಕರಿಗೆ ಸ್ವಚ್ಛತೆ ಕಾಪಾಡಲು ಸಲಹೆ ನೀಡಿದರು.
ಶಾಸಕರೊಂದಿಗೆ ನಗರ ಸೇವಕರಾದ ರಾಜಶೇಖರ ಡೋಣಿ, ಲಕ್ಷ್ಮೀ ರಾಠೋಡ, ಚಿಕ್ಕಲದಿನ್ನಿ ಹಾಗೂ ಅಧಿಕಾರಿಗಳು ಸ್ಥಳೀಯ ವಾಸಿಗಳು ಉಪಸ್ಥಿತರಿದ್ದರು.
ಉನ್ನತ ಶಿಕ್ಷಣ ಉತ್ತಮ ಜೀವನಕ್ಕೆ ನಾಂದಿ: ಪ್ರವೀಣ ಜೈನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ