Kannada NewsKarnataka NewsLatest

ಖಾನಾಪುರ ಪಟ್ಟಣದಲ್ಲಿ  “ಸ್ಮಾರ್ಟ್ ಬಸ್ ನಿಲ್ದಾಣ”  

ಪ್ರಗತಿವಾಹಿನಿ ಸುದ್ದಿ, ಖಾನಾಪುರ -ಖಾನಾಪುರ ಪಟ್ಟಣದಲ್ಲಿ ಮಿನಿ ವಿಧಾನಸೌಧದ ತಲೆ ಎತ್ತುವದಕ್ಕಿಂತ ಮುಂಚೆ ಸದ್ಯ ಅದರ ಎದುರುಗಡೆ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ತೆರೆದ ಬಸ್ ನಿಲ್ದಾಣ ಇತ್ತು. ದಶಕಗಳಿಂದ ಮಳೆ, ಗಾಳಿ, ಬಿಸಿಲು ಮುಂತಾದ ನೈಸರ್ಗಿಕ ತೊಂದರೆಗಳನ್ನು ಎದುರಿಸುತ್ತ ಸಾರ್ವಜನಿಕರು ತೆರೆದ ಬಸ್ ನಿಲುಗಡೆಯಲ್ಲಿ ನಿಂತು, ಸಂಚಾರಿ ವಾಹನಗಳಿಗಾಗಿ ಕಾಯ್ದು ಸಂಚರಿಸಲು ಪರದಾಡುವ ಪರಿಸ್ಥಿತಿ ಎದುರಾಗಿತ್ತು.
ಈ ಹಿಂದೆ ಉಳಿದೆಲ್ಲ ಪಕ್ಷಗಳ ಶಾಸಕರು ಬಂದು ಹೋದರೂ ಸುರಕ್ಷಿತ ಹಾಗೂ ಸುಸಜ್ಜಿತ ಬಸ್ ನಿಲ್ದಾಣ ಒದಗಿಸುವಲ್ಲಿ ವಿಪಲರಾಗಿರುವುದು ಜಗಜ್ಜಾಹಿರವಾದ ಸಂಗತಿ.
 ಶಾಸಕಿ ಅಂಜಲಿ ನಿಂಬಾಳಕರ್ ಸಾರ್ವಜನಿಕರಿಗೆ ಅನುಕೂಲ ಒದಗಿಸಲು ಮತ್ತು ಪಟ್ಟಣಕ್ಕೆ ಮೆರಗು ತರುವ ನಿಟ್ಟಿನಲ್ಲಿ ನವೀನ ಬಸ್ ನಿಲ್ದಾಣದ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ. ಅದರಂತೆ ಸ್ಮಾರ್ಟ್ ಬಸ್ ನಿಲ್ದಾಣ  ನಿರ್ಮಾಣ ಮಾಡಲು ಗುರುವಾರ ಶಿವಸ್ಮಾರಕ ಭವನದ ಸಮೀಪ  ಸ್ಟೇಷನ್ ರೋಡಿನ  ತಹಶಿಲ್ದಾರ ಕಛೇರಿಯ ಪಕ್ಕ ನಿಲ್ದಾಣ ನಿರ್ಮಿಸಲು  ಸಂಕಲ್ಪ ಮಾಡಿ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಶಿವಾನಂದ ಉಳ್ಳಾಗಡ್ಡಿ , ಪಟ್ಟಣ ಪಂಚಾಯತನ ಸದಸ್ಯರು ಹಾಗೂ   ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button