ಪ್ರಗತಿವಾಹಿನಿ ಸುದ್ದಿ, ಮ್ಯಾಡ್ರಿಡ್: ಕಳ್ಳಸಾಗಣೆಯಾಗುತ್ತಿದ್ದ ಖ್ಯಾತ ಸ್ಪ್ಯಾನಿಷ್ ಕಲಾವಿದ ಪಿಬ್ಲೋ ಪಿಕಾಸ್ಸೋ ಅವರ ಮೂಲ ಸ್ಕೆಚ್ ಒಂದನ್ನು ಸ್ಪೇನ್ ಐಬಿಝಾ ಏರ್ ಪೋರ್ಟ್ ನ ಕಸ್ಟಂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
1966ರ ಸಂದರ್ಭದ ಈ ಸ್ಕೆಚ್ ಕಲಾಕೃತಿಯ ಮೌಲ್ಯ 450000 ಯುರೋ (3.6 ಕೋಟಿಗೂ ಹೆಚ್ಚು) ಎಂದು ಅಂದಾಜಿಸಲಾಗಿದೆ.
ಸ್ವಿಡ್ಜರ್ ಲ್ಯಾಂಡ್ ನ ಪ್ರಜೆಯೊಬ್ಬ ಇದನ್ನು ತನ್ನ ಸೂಟ್ ಕೇಸ್ ನಲ್ಲಿ ಇಟ್ಟುಕೊಂಡು ಹೊರಟಿದ್ದ ವೇಳೆ ಸ್ಪ್ಯಾನಿಷ್ ಕಸ್ಟಂ ಅಧಿಕಾರಿಗಳು ಇದನ್ನು ಪರಿಶೀಲಿಸಿದರು. ಸಂದೇಹದ ಆಧಾರದಲ್ಲಿ ಪ್ರಶ್ನಿಸಿದಾಗ ಆತ ಝ್ಯೂರಿಕ್ ಆರ್ಟ್ ಗ್ಯಾಲರಿಯ ರಸೀದಿಯೊಂದನ್ನು ತೋರಿಸಿ ಇದು ಕಲಾಕೃತಿಯ ನಕಲು ಎಂದು ಹೇಳಿದ್ದಾನೆ.
ಈ ವೇಳೆ ಸೂಟ್ ಕೇಸ್ ಪರಿಶೀಲನೆ ನಡೆಸಿದಾಗ ಅದರಲ್ಲಿ ಗ್ಯಾಲರಿಯ ಇನ್ನೊಂದು ಹೆಚ್ಚುವರಿ ದರದ ರಸೀದಿ ಪತ್ತೆಯಾಗಿದೆ. ವಿಚಾರಣೆ ತೀವ್ರಗೊಳಿಸಿದಾಗ ಇದು ಪಿಕಾಸ್ಸೋ ಅವರ ಮೂಲ ಸ್ಕೆಚ್ ಎಂಬುದು ತಿಳಿದುಬಂದಿದೆ.
ವ್ಯಕ್ತಿ ಮೇಲೆ ಕಳ್ಳಸಾಗಣೆ ಪ್ರಕರಣ ದಾಖಲಿಸಿದ್ದು ಆರ್ಟ್ ಗ್ಯಾಲರಿಯ ನಿರ್ದೇಶಕರು ಕೂಡ ತನಿಖೆಗೆ ಸಹಕರಿಸಿದ್ದಾರೆ.
ಶೃಂಗೇರಿ ಶ್ರೀಗಳಿಗೆ ಅವಮಾನ; ಆರೋಪಿಗೆ 3 ವರ್ಷ ಜೈಲು ಶಿಕ್ಷೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ