ವಿದ್ಯಾರ್ಥಿಗಳ ಬೆಳವಣಿಗೆ ಆಗದ ಹೊರತು ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ.
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಅವರು ಭಾವುರಾವ ಕಾಕತಕರ ಮಹಾವಿದ್ಯಾಲಯ ಹಾಗೂ ನ್ಯಾಕ್ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ‘ಅಕ್ಯಾಡಮಿಕ್ ಅಂಡ್ ಅಡ್ಮಿನಿಸ್ಟ್ರೇಟಿವ್ ಆಡಿಟ್’ ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಉದ್ಗಾಟಿಸಿ ಮಾತನಾಡಿದರು. ಮಹಾತ್ಮ ಜೋತಿಬಾ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ಉದ್ಗಾಟಿಸಿದರು. ವೇದಿಕೆ ಮೇಲೆ ಡಾ.ಎ.ಎಸ್.ಕುಲಕರ್ಣಿ , ಡಾ.ಎಸ್.ಎನ್.ಪಾಟೀಲ, ಪ್ರೊ. ಎಮ್.ಎನ್.ದೇಸಾಯಿ ಇದ್ದರು.
ಮೂಲಭೂತವಾಗಿ ವಿದಾರ್ಥಿಗಳ ಬೆಳವಣಿಗೆ ಆಗದ ಹೊರತು ಸಾಮಾಜಿಕ ಬದಲಾವಣೆ ಸಾದ್ಯವಿಲ್ಲ. ಆದ್ದರಿಂದ ಶಿಕ್ಷಣ ಸಂಸ್ಥೆಗಳು ಸುಧಾರಣೆ ಕುರಿತು ಗಂಭೀರವಾಗಿ ಚಿಂತಿಸಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎನ್.ಪಾಟೀಲ ಮಾತನಾಡಿ – ವಿದ್ಯಾರ್ಥಿಗಳ ಎಳ್ಗೆಯ ದೃಷ್ಟಿಯಿಂದ ನಮ್ಮ ಸಂಸ್ಥೆ ಪ್ರಯತ್ನಿಸುತ್ತಿದೆ ಎಂದರು.
ಆರಂಭದಲ್ಲಿ ಡಾ. ಎ.ಎಸ್.ಕುಲಕರ್ಣಿ ಸ್ವಾಗತಿಸಿದರು. ಡಾ. ಡಿ.ಎನ್.ಮೀಸಾಳೆ ಪರಿಚಯಸಿದರು. ಪ್ರೊ ಎಮ್.ಎನ್.ದೇಸಾಯಿ ವಂದಿಸಿದರು. ಪ್ರೊ ಭಕ್ತಿ ದೇಸಾಯಿ ನಿರೂಪಿಸಿದರು. ನಂತರ ನಡೆದ ಎರಡನೆ ಗೋಷ್ಟಿಯಲ್ಲಿ ಹುಕ್ಕೇರಿಯ ಎಸ್.ಎಸ್.ಎನ್.ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಎಸ್.ಗವತಿ ಅವರು ‘ ಅಡ್ಮಿನಿಸ್ಟ್ರೇಟಿವ್ ಆಡಿಟ್’ ಕುರಿತು, ಮೂರನೆ ಗೋಷ್ಟಿಯಲ್ಲಿ ‘ಗ್ರೀನ ಆಡಿಟ್ ಕುರಿತು ಕೊಲ್ಲಾಪೂರದ ಸೈಬರ್ ಸಂಸ್ಥೆಯ ಡಾ.ಎಸ್.ಆರ್.ಕುಲಕರ್ಣಿ ಮಾತನಾಡಿದರು
ನಂತರ ಸಮಾರೋಪ ಸಮಾರಂಭ ಜರುಗಿತು. ಈ ವಿಚಾರ ಸಂಕಿರಣದಲ್ಲಿ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ಬಿ.ಕೆ .ಕಾಲೇಜಿನ ಪ್ರಾಧ್ಯಾಪಕರುಗಳು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಹಾಜರಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ