
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಹಾಗೂ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆಗೆ ಮಾಡಿದ ಅವಮಾನವನ್ನು ಖಂಡಿಸಿ ಸಾಮಾಜಿಕ ಸಾಮರಸ್ಯ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಭಾರತವೆಂದರೆ ಸರ್ವಜನಾಂಗದ ಶಾಂತಿಯ ತೋಟ. ಇಲ್ಲಿ ಜಾತಿಯನ್ನು ಮಧ್ಯೆ ತರಬಾರದು. ಬೆಳಗಾವಿಯಲ್ಲಿ ಬಹಳ ದಿನಗಳ ನಂತರ ಅಧಿವೇಶನ ನಡೆಯುತ್ತಿದೆ. ಇಂಥಹ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಖಂಡನೀಯ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದ್ದು, ಶಾಂತ ರೀತಿಯಲ್ಲಿ ಅಧಿವೇಶನ ನಡೆಯಲು ಎಲ್ಲರೂ ಸಹಕರಿಸಬೇಕು ಎಂದು ಅವರು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಸಾಬಣ್ಣ ತಳವಾರ, ಮಹಾದೇವ ಚೌಗಲೆ ಮಾತನಾಡಿ, ಭಾಷೆ ಸಾಮರಸ್ಯಕ್ಕಾಗಿ ಎಲ್ಲರೂ ಒಂದಾಗಬೇಕೆಂದರು.
ಕುರುಬ ಸಮಾಜದ ಅಶೋಕ ಸದಲಗೆ, ಶಿವಾಜಿ ಶಹಾಪುರಕರ್, ಶ್ರೀಮಂತ ದನಘರ್, ಪ್ರಕಾಶ ಬಾಳೆಕುಂದ್ರಿ, ಕನ್ನ್ಯ್ಯ ಜಂಬಾಲಿ, ರಾಜೇಂದ್ರ ಜೈನ, ರೋಹನ್ ಜುವಳಿ, ವಿಶ್ವಹಿಂದೂಪರಿಷತ್ ಉತ್ತರ ಕರ್ನಾಟಕ ಸಹಸಂಚಾಲಕ ಕೃಷ್ಣ ಭಟ್, ಪ್ರಮುಖರಾದ ಶ್ರೀಕಾಂತ ಕದಂ, ಅಶೋಕ ಶಿಂತ್ರೆ ಮೊದಲಾದವರಿದ್ದರು.
ರಾಷ್ಟ್ರೀಯ ಹೆದ್ದಾರಿ, ರಿಂಗ್ ರಸ್ತೆ ಅಭಿವೃದ್ದಿಗಾಗಿ ರಾಜ್ಯ/ಕೇಂದ್ರ ಸರ್ಕಾರಗಳ 50:50 ವೆಚ್ಚಕ್ಕೆ ಕ್ರಮ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ