*75ರ ಅಜ್ಜನಿಗೆ ಕೈಕೊಟ್ಟು, ಹಳೆ ಗಂಡನ ಜೊತೆ ಹೋದ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್*

ಪ್ರಗತಿವಾಹಿನಿ ಸುದ್ದಿ: 75 ವರ್ಷದ ವೃದ್ಧನ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದ 30 ವರ್ಷದ ಯುವತಿ ಇದೀಗ ಮದುವೆಯ ನಿರ್ಧಾರದಿಂದ ಹಿಂದೆ ಸರಿದಿದ್ದಾಳೆ. ಉತ್ತರ ಪ್ರದೇಶದ ರಾಮ್ ಸಾಗರ್ ಮತ್ತು ರೀನಾ ರಜಪೂತ್ ಜೋಡಿ ನವರಾತ್ರಿ ಬಳಿಕ ಮದುವೆಯಾಗುವುದಾಗಿ ಘೋಷಿಸಿತ್ತು. ಆದರೆ, ರೀನಾಳ ಮೊದಲ ಪತಿ ಮರಳಿ ಬಂದಿರುವುದೇ ಈ ಸಂಬಂಧ ಮುರಿದುಬೀಳಲು ಕಾರಣ ಎಂಬ ಮಾಹಿತಿ ಹರಿದಾಡುತ್ತಿದೆ.
ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ರೀನಾ ರಜಪೂತ್ ಮತ್ತು 75 ವರ್ಷದ ರಾಮ್ ಸಾಗರ್ ನಡುವಿನ 45 ವರ್ಷಗಳ ವಯಸ್ಸಿನ ಅಂತರ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಕೆಲ ದಿನಗಳ ಹಿಂದೆ ಈ ಜೋಡಿಯ ನಿಶ್ಚಿತಾರ್ಥದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿದ್ದವು. ನವರಾತ್ರಿ ಮುಗಿದ ಬಳಿಕ ಮದುವೆಯಾಗುವುದಾಗಿ ಇಬ್ಬರೂ ಹೇಳಿಕೊಂಡಿದ್ದರು.
ರೀನಾ ಹೇಳಿಕೊಂಡಿರುವ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆ ರಾಮ್ ಸಾಗರ್ ಜೊತೆ ಪರಿಚಯವಾಗಿತ್ತು. ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ವಿಶೇಷವೆಂದರೆ, ರಾಮ್ ಸಾಗರ್ ರೀನಾ ಸ್ನೇಹಿತೆ ರಾಧಾಳ ತಂದೆ. ಇವರ ಸಂಬಂಧ ಕ್ರಮೇಣ ಬೆಳೆದು ನಿಶ್ಚಿತಾರ್ಥದ ಹಂತಕ್ಕೆ ತಲುಪಿತ್ತು.
ಆದರೆ, ಇದೀಗ ರೀನಾ ತಮ್ಮ ಮೊದಲ ಪತಿ ಮತ್ತು ಮಕ್ಕಳ ಜೊತೆ ಜೀವನ ಮುಂದುವರಿಸಲು ನಿರ್ಧರಿಸಿದ್ದಾಳೆ. ಮೊದಲ ಪತಿ ಮರಳಿ ಬಂದಿದ್ದು, ಇಬ್ಬರ ನಡುವೆ ರಾಜಿ ಸಂಧಾನ ನಡೆದಿರುವುದೇ ಈ ನಿರ್ಧಾರಕ್ಕೆ ಕಾರಣ ಎಂದು ರೀನಾ ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದಾಳೆ. ತಮ್ಮ ಕುಟುಂಬದೊಂದಿಗೆ ಮತ್ತೆ ಜೀವನ ಆರಂಭಿಸಲು ಬಯಸಿರುವುದಾಗಿ ತಿಳಿಸಿ, ಈ ವಿಚಾರದಲ್ಲಿ ತೊಂದರೆ ನೀಡದಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾಳೆ.
ಕೌಟುಂಬಿಕ ಉದ್ವಿಗ್ನತೆಯ ಕಾರಣದಿಂದ ಮೊದಲ ಪತಿ ತಮ್ಮಿಂದ ದೂರವಾಗಿದ್ದರು. ಆ ಸಮಯದಲ್ಲಿ ಯಾವುದೇ ಬೆಂಬಲ ಸಿಗಲಿಲ್ಲ ಎಂದು ರೀನಾ ಹೇಳಿಕೊಂಡಿದ್ದಾಳೆ. ಬಳಿಕ ರಾಮ್ ಸಾಗರ್ ಅವರ ಪುತ್ರಿ ಹಾಗೂ ತನ್ನ ಸ್ನೇಹಿತೆ ರಾಧಾಳೊಂದಿಗೆ ಮಾತನಾಡಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾಗಿ ತಿಳಿಸಿದ್ದಾಳೆ. ಆದರೆ, ಇತ್ತೀಚಿನ ವಿಡಿಯೋದಲ್ಲಿ ರಾಧಾಳ ಒತ್ತಾಯದ ಮೇರೆಗೆ ರಾಮ್ ಸಾಗರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ಹೇಳಿರುವುದಾಗಿ ವರದಿಯಾಗಿತ್ತು.
ನಿಶ್ಚಿತಾರ್ಥದ ಬಳಿಕ ಮದುವೆಯ ನಿರ್ಧಾರ ಬದಲಾಗಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




