ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಮ್ಯಾಟ್ರಿಮೋನಿಯಲ್ ಜಾಹೀರಾತು ಒಂದರಲ್ಲಿ “ಸಾಫ್ಟ್ ವೇರ್ ಎಂಜಿನಿಯರ್ ಗಳು ಕರೆ ಮಾಡಬೇಡಿ” ಎಂಬ ಒಕ್ಕಣೆ ಹಾಕಿದ್ದಕ್ಕೆ ಜಾಲತಾಣಿಗರು ಜಾಹೀರಾತುದಾರರ ಜನ್ಮ ಜಾಲಾಡಿದ್ದಾರೆ.
ಪತ್ರಿಕೆಯೊಂದರಲ್ಲಿ ಈ ಮ್ಯಾಟ್ರಿಮೋನಿಯಲ್ ಜಾಹೀರಾತು ಪ್ರಕಟವಾಗಿತ್ತು. ಅದರಲ್ಲಿ ಹಿಂದೂ ಪಿಳ್ಳೈ ಜಾತಿಯ ಯುವತಿಗೆ ವರ ಬೇಕಾಗಿದ್ದಾನೆ ಎಂದು ಎಲ್ಲ ವಿವರ ನಮೂದಿಸಿ ಅದೇ ಜಾತಿಯ IAS/IPS/ Working Doctor(PG), Industrialist, Businessman ಗಳು ಸಂಪರ್ಕಿಸಲು ಕೋರಲಾಗಿತ್ತು. ಇದೇ ವೇಳೆ ಸಾಫ್ಟ್ ವೇರ್ ಎಂಜಿನಿಯರ್ ಗಳು ಕರೆ ಮಾಡಬೇಡಿ ಎಂದು ಹೇಳಲಾಗಿತ್ತು.
ಇದಕ್ಕೆ ಟ್ವಿಟ್ಟರ್ ಬಳಕೆದಾರರು “ಮೆಕ್ಯಾನಿಕಲ್ ಎಂಜಿನಿಯರ್ ಗಳು ಕರೆ ಮಾಡಬಹುದೇ? ಎಂದು ಪ್ರಶ್ನಿಸಿದ್ದರೆ, ದಿನಪತ್ರಿಕೆಯ ಜಾಹೀರಾತು ಪ್ರಕಟವಾದ ತುಣುಕನ್ನು ಹಂಚಿಕೊಂಡಿರುವ ಹೆಲಿಯೊಸ್ ಕ್ಯಾಪಿಟಲ್‌ನ ಸಂಸ್ಥಾಪಕ ಸಮೀರ್ ಅರೋರಾ, “ಐಟಿಯ ಭವಿಷ್ಯವು ಅಷ್ಟು ಉತ್ತಮವಾಗಿ ಕಾಣುತ್ತಿಲ್ಲ” ಎಂದು ಬರೆದಿದ್ದಾರೆ.
“ಚಿಂತಿಸಬೇಡಿ… ಎಂಜಿನಿಯರ್‌ಗಳು ಕೆಲವು ಪತ್ರಿಕೆಗಳ ಜಾಹೀರಾತನ್ನು ಅವಲಂಬಿಸುವುದಿಲ್ಲ. ಅವರು ಎಲ್ಲವನ್ನೂ ತಾವಾಗಿಯೇ ಕಂಡುಕೊಳ್ಳುತ್ತಾರೆ,” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.
ಸೇವಾ ಪಾಕ್ಷಿಕದ ಅಂಗವಾಗಿ ಕುಂಬಾರಿಕೆಗೆ ಪ್ರೋತ್ಸಾಹ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ