CrimeKannada NewsKarnataka NewsLatest

*ಪಾರ್ಟಿ ವೇಳೆ ಗಲಾಟೆ: ಮೂರನೇ ಮಹಡಿಯಿಂದ ಬಿದ್ದು ಸಾಫ್ಟ್ ವೇರ್ ಇಂಜಿನಿಯರ್ ಸಾವು: ಕೊಲೆ ಆರೋಪ*

ಪ್ರಗತಿವಾಹಿನಿ ಸುದ್ದಿ: ವೀಕೆಂಡ್ ಪಾರ್ಟಿಗೆ ಸ್ನೇಹಿತರೊಂದಿಗೆ ಪಬ್ ಗೆ ಹೋಗಿದ್ದಾಗ ಮತ್ತೊಂದು ಯುವಕರ ಗುಂಪಿನವರೊಂದಿಗೆ ಆರಂಭವಾದ ಗಲಾಟೆ ಸಾಫ್ಟ್ ವೇರ್ ಇಂಜಿನಿಯರ್ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.

ಮೈಸೂರು ನಗರದ ವಿಜಯನಗರ ಎರಡನೇ ಹಂತದಲ್ಲಿರುವ ಪರ್ಪಲ್ ಹೆಜ್ ರೆಸ್ಟೋರೆಂಟ್ ನಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು ಗೋಕುಲಂ ನಿವಾಸಿ 32 ವರ್ಷದ ನಿಶಾಂತ್ ಎಂದು ಗುರುತಿಸಲಾಗಿದೆ. ನಿಶಾಂತ್ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ನಿಶಾಂತ್ ತನ್ನ ಸ್ನೇಹಿತರಾದ ಸಂದೀಪ್ ಮತ್ತು ದೀಕ್ಷಿತ್ ಜೊತೆ ಪಬ್‌ನಲ್ಲಿ ಪಾರ್ಟಿ ಮುಗಿಸಿ ಹೊರಬರುತ್ತಿದ್ದ. ಈ ವೇಳೆ ರಾಕಿ ಎಂಬಾತ ಹಾಗೂ ಅವನ ಸ್ನೇಹಿತರು ಎದುರಾಗಿದ್ದು, ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆದಿದೆ ಎನ್ನಲಾಗಿದೆ. ಗಲಾಟೆಯ ಮಧ್ಯೆ ನಿಶಾಂತ್ ಪಬ್‌ನ ಎರಡನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ನಿಶಾಂತ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ನಿಶಾಂತ್‌ನ್ನು ಉದ್ದೇಶಪೂರ್ವಕವಾಗಿ ಮಹಡಿಯಿಂದ ತಳ್ಳಿಹಾಕಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button