ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗೋವಾ ಮತ್ತು ಕರ್ನಾಟಕದ ಗಡಿ ಖಾನಾಪುರ ತಾಲೂಕಿನ ಸುರಾಲ್ ಕ್ರಾಸ್ ನ ಅಬಕಾರಿ ನಾಕಾದಲ್ಲಿ ದಿನದ ಇಪ್ಪತ್ನಾಲ್ಕು ಘಂಟೆಯೂ ಅಬಕಾರಿ ಪೊಲೀಸರು ಮತ್ತು ಕಣಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾರ್ಯಕರ್ತರು ಗೋವಾದಿಂದ ಕರ್ನಾಟಕಕ್ಕೆ ಆಗಮಿಸುತ್ತಿರುವ ಎಲ್ಲ ಕಾರ್ಮಿಕ ಪಾದಚಾರಿಗಳ ಪ್ರಾಥಮಿಕ ಚಿಕಿತ್ಸೆ ನಡೆಸುತ್ತಿದ್ದಾರೆ. ಎಲ್ಲರ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ರಾತ್ರಿ ವಿದ್ಯುತ್ತಿನ ತೀವ್ರ ಅಭಾವದಿಂದಾಗಿ ದಟ್ಟ ಅರಣ್ಯದ ಈ ಭಾಗದಲ್ಲಿ ಕೆಲಸ ನಿರ್ವಹಣೆ ತುಂಬಾ ಕಷ್ಟದ ಕೆಲಸವಾಗಿದೆ. ಅಲ್ಲಿಯ ಆರೋಗ್ಯ ಕೇಂದ್ರ ನಿರ್ವಹಣೆ ಮಾಡುತ್ತಿರುವ “ಯುನೈಟೆಡ್ ಸಮಾಜ ಸಂಸ್ಥೆ”ಯಿಂದ ವಿಷಯ ತಿಳಿದ “ಸೆಲ್ಕೊ” ಸೋಲಾರ್ ಸಂಸ್ಥೆ ಸೆಲ್ಕೋ ಬೆಳಗಾವಿ ಮ್ಯಾನೇಜರ್ ವಿನಾಯಕ ಹೆಗಡೆ ನೇತೃತ್ವದಲ್ಲಿ ಐದು ಸೋಲಾರ್ ಲೈಟ್ ಗಳನ್ನು ಅಬಕಾರಿ ನಾಕಾದಲ್ಲಿ ಮತ್ತು ಐದು ದೀಪಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾತ್ಕಾಲಿಕವಾಗಿ ಅಳವಡಿಸಿ ಬೆಳಕಿನ ಸಹಾಯ ನೀಡಿದೆ.
ಇದರಿಂದಾಗಿ ಅಬಕಾರಿ ತನಿಖಾ ಅಧಿಕಾರಿಗಳು ಮತ್ತು ಪ್ರಾಥಮಿಕ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹರ್ಷ ವ್ಯಕ್ತ ಪಡಿಸಿದ್ದಾರೆ.
ಸೆಲ್ಕೊ ಕಳೆದ ಇಪ್ಪತ್ತೈದು ವರ್ಷಗಳಿಂದ ಸೋಲಾರ್ ಮುಖೇನ ಅನೇಕ ಸಮಾಜಮುಖಿ ಸೇವೆ ನೀಡುತ್ತಿದೆ. ಕಳೆದ ವರ್ಷ ಮಹಾ ಮಳೆಯಿಂದ ನೆರೆ ಬಂದಾಗ ಕೂಡಾ ಇದೇ ರೀತಿ ಸ್ಪಂದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ