
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರದ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರ ತಾಯಿ ಸೋಮವ್ವ ಅಂಗಡಿ ಇಂದು ಬೆಳಗ್ಗೆ 9.20ಕ್ಕೆ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದ ನಾಗೇರಹಾಳ ಗ್ರಾಮದವರಾದ ಸೋಮವ್ವ ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಐವರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳು. ಸುರೇಶ ಅಂಗಡಿ ಅವರ ಮೇಲೆ ಅತ್ಯಂತ ಪ್ರೀತಿ ಹೊಂದಿದ್ದ ಸೋಮವ್ವ, ಸುರೇಶ ಅಂಗಡಿ ಅಕಾಲಿಕ ನಿಧನದಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದರು.
ಕೆಕೆಕೊಪ್ಪದ ಪ್ರೌಢ ಶಾಲೆಗೆ ಸೋಮವ್ವ ಅಂಗಡಿ ನಾಮಕರಣ ಮಾಡಲಾಗಿತ್ತು.
ಇಂದು ಸಂಜೆ 5 ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದೆ.
ಹೆಬ್ಬಾಳಕರ್ ಸಂತಾಪ
ಸೋಮವ್ವ ಅಂಗಡಿ ನಿಧನಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನನ್ನ ಮೇಲೆ ಸೋಮವ್ವ ಅಪಾರ ಪ್ರೀತಿ ಹೊಂದಿದ್ದರು. ಮಗಳಂತೆ ಕಾಣುತ್ತಿದ್ದರು ಎಂದು ಸ್ಮರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ